ವಿಜಯಪುರ: ಪ್ರಸಕ್ತ ವರ್ಷದ ಪದವೀಧರ (ಜಿಪಿಟಿ) ಪ್ರಾಥಮಿಕ ಶಾಲೆ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ನೀಡಿ, ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪದವೀಧರ ಶಿಕ್ಷಕರು ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಿಯಮದಂತೆ 2016ರ ನಂತರ ನೇಮಕವಾದ ಎಲ್ಲ ಜಿಪಿಟಿ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಸಹ ವರ್ಗಾವಣೆ ವಂಚಿತ ಪದವೀಧರ ಶಿಕ್ಷಕರಿಗೆ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ವರ್ಗವಣೆ ಪ್ರಕ್ರಿಯೆ ನಡೆಸಬೇಕೆಂದು ಮನವಿ ಮಾಡಿದರು.
ನ್ಯಾಯ ಒದಗಿಸಲು ವಿಳಂಬ ಮಾಡಿದರೆ, ನಾವುಗಳು ಹೋರಾಟದ ಹಾದಿ ಹಿಡಿಯಲು ನಿರ್ಣಯಿಸಿದ್ದೇವೆ. ಹೋರಾಟದ ಹಾದಿಗೆ ಅವಕಾಶ ಮಾಡಿಕೊಡದೆ ಜಿಪಿಟಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶೆಡಶ್ಯಾಳ, ಖಜಾಂಚಿ ಜುಬೇರ ಕೆರೂರ, ಜಿಪಿಟಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಕಾರಿ, ಪ್ರಧಾನ ಕಾರ್ಯದರ್ಶಿ ಆನಂದ್ ಕಂಬಾರ, ಬಬಲೇಶ್ವರ ತಾಲೂಕು ಅಧ್ಯಕ್ಷ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸತೀಶ ಬಗಲಿ, ಗ್ರಾಮೀಣ ಅಧ್ಯಕ್ಷ ಸುಭಾಸ ತೊಳನೂರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ ಅಹಿರಸಂಗ, ಚಡಚಣ ತಾಲೂಕು ಅಧ್ಯಕ್ಷ ಶಂಕರಲಿಂಗ ಪಾಟೀಲ, ಶಿವಾನಂದ ಬಾಸಗಿ, ಶಿವರಾಜ್ ಪಾಟೀಲ್, ಮಾಧವ ಗುಡಿ, ಇಸಾಕ್ ಜಾಗೀರದಾರ, ಹನುಮಂತ ಪೂಜಾರಿ, ಸಂಗಮೇಶ ದುದಗಿ, ಉಮೇಶ ರೊಟ್ಟಿ, ಜಿಪಿಟಿ ಶಿಕ್ಷಕರು ಉಪಸ್ಥಿತರಿದ್ದರು.