ಕೆಎಸ್‌ಆರ್‌ಟಿಸಿ ಡಿಪೋಕ್ಕೆ ತ್ಯಾವಣ ಸಮೀಪ ಜಾಗ ಮಂಜೂರಾತಿ ಪತ್ರವನ್ನು ತಹಸೀಲ್ದಾರ್ ಗೌರಮ್ಮ ಅವರು ಜಿಲ್ಲಾ ಕೆಎಸ್‌ಆರ್‌ಟಿಸಿ ವಿಭಾಗದ ನಿಯಂತ್ರಣ ಅಧಿಕಾರಿ ಜಗದೀಶ್‌ಗೆ ಹಸ್ತಾಂತರಿಸಿದರು. 
ಜಿಲ್ಲೆ

ತ್ಯಾವಣದಲ್ಲಿ ಕೆಎಸ್‌ಆರ್‌ಟಿಸಿ ಡಿಪೋಗೆ ಜಾಗ ಮಂಜೂರು

ಶೃಂಗೇರಿ: ತಾಲೂಕಿನ ಕೆಎಸ್‌ಆರ್‌ಟಿಸಿ ಬಸ್ ಡಿಪೋಗೆ ವಿದ್ಯಾರಣ್ಯಪುರ ಗ್ರಾಪಂ ತ್ಯಾವಣ ಸಮೀಪ ಸರ್ವೇ ನಂಬರ್ 196ರಲ್ಲಿ ನಾಲ್ಕು ಎಕರೆ 23 ಗುಂಟೆ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ.

ತಹಸೀಲ್ದಾರ್ ಗೌರಮ್ಮ ಅವರು ಮಂಜೂರಾತಿ ಪತ್ರವನ್ನು ಜಿಲ್ಲಾ ಕೆಎಸ್‌ಆರ್‌ಟಿಸಿ ವಿಭಾಗದ ನಿಯಂತ್ರಣ ಅಧಿಕಾರಿ ಜಗದೀಶ್ ಅವರಿಗೆ ಸೋಮವಾರ ಹಸ್ತಾಂತರಿಸಿದರು.
2015ರಲ್ಲಿ ಮೆಣಸೆ ಗ್ರಾಪಂ ಮಸಿಗೆ ಗ್ರಾಮದ ಸಮೀಪ ಐದು ಎಕರೆ ಜಾಗ ಡಿಪೋಗಾಗಿ ಮಂಜೂರಾತಿ ಆಗಿತ್ತು. ಈ ಹಿಂದೆ ಶಾಸಕ ಟಿ.ಡಿ.ರಾಜೇಗೌಡ ಗುದ್ದಲಿ ಪೂಜೆ ನೆರವೇರಿಸಿದ್ದರು. ತಾಂತ್ರಿಕ ಕಾರಣದಿಂದ ಜಾಗ ಲಭ್ಯವಾಗದ ಕಾರಣ ಶಾಸಕ ಸೂಕ್ತ ಜಾಗವನ್ನು ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ ಹುಡುಕಿಸಿ ಜಾಗಕ್ಕೆ ಪ್ರಸ್ತುತ ಮಂಜೂರಾತಿ ಪತ್ರ ದೊರಕಿಸಿಕೊಟ್ಟಿದ್ದಾರೆ.