ಜಿಲ್ಲೆ

ಅಳ್ಳೋಳ್ಳಿ ಜಾತ್ರೆ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್‌ ಚಾಲನೆ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಳ್ಳೋಳ್ಳಿ ಗ್ರಾಮದ ಶ್ರೀ ಸಾವಿರ ದೇವರ ಸಂಸ್ಥಾನ ಮಠದ ಸದ್ಗುರು ಸಿದ್ಧಲಿಂಗೇಶ್ವರರ ೯ನೇ ಜಾತ್ರಾ ಮಹೋತ್ಸವವನ್ನು ಪೂಜ್ಯರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಮಂಗಳವಾರ ಸಂಜೆ ಉದ್ಘಾಟಿಸಿ ಚಾಲನೆ ನೀಡಿದರು. ಶಿವಶಂಕರ ಶಿವಾಚಾರ್ಯರು, ಸೋಮಶೇಖರ ಶಿವಾಚಾರ್ಯರು, ಸಿದ್ಧರಾಮ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು, ಸಂಗಮನಾಥ ದೇವರು, ಪಂಚಾಕ್ಷರಿ ಸ್ವಾಮಿಗಳು,ರೇವಣಸಿದ್ಧ ಶಿವಾಚಾರ್ಯರು, ಕೇದಾರಲಿಂಗ ದೇವರು,ರಾಜಶೇಖರ ಶಿವಾಚಾರ್ಯರು,ಡಾ.ಪ್ರಶಾಂತ ಕುಲಕರ್ಣಿ,ಡಾ.ಗಿರೀಶ ಪವಾರ ಇತರರಿದ್ದರು.