ಜಿಲ್ಲೆ

ಅಳ್ಳೊಳ್ಳಿ ಚಿಕ್ಕಮಕ್ಕಳ ದಂತ ಚಿಕಿತ್ಸಾಲಯ: ಮಕ್ಕಳಿಗೆ ಹಲ್ಲುಗಳ ಆರೋಗ್ಯ ಸಲಹೆ.

Gadag - Shivanand Hiremath

ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಬೇಸಿಗೆ ಶಿಬಿರದ ಮಕ್ಕಳಿಗೆ ಗದಗ ನಗರದ ಅಳ್ಳೊಳ್ಳಿ ಚಿಕ್ಕಮಕ್ಕಳ ದಂತ ಚಿಕಿತ್ಸಾಲಯದ ಚಿಕ್ಕಮಕ್ಕಳ ದಂತ ಸ್ಪೇಶಾಲಿಸ್ಟ್ ಖ್ಯಾತ ವೈದ್ಯರಾದ ಡಾ. ರೋಹಿತ್ ಕೊಪ್ಪಳಕರ್ ರವರು ಆರೋಗ್ಯ ಸಲಹೆ ನೀಡಿದರು.

ಡಾ. ರೋಹಿತ್ ಕೊಪ್ಪಳಕರ್ ರವರು ಮಕ್ಕಳನ್ನು ಉದ್ದೇಶಿಸಿ ಪ್ರತಿಯೊಬ್ಬರು ಪ್ರತ್ಯೇಕ ಬ್ರಷ್ ನಲ್ಲಿ ಹಲ್ಲುಜ್ಜುವ ಅಭ್ಯಾಸ ಇಟ್ಟುಕೊಳ್ಳಬೇಕು, ಯಾವುದೇ ಆಹಾರ ಪದಾರ್ಥ ಸೇವಿಸಿದ ನಂತರ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲುಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಪ್ರತಿನಿತ್ಯ ಬೆಳಿಗ್ಗೆ ಮತ್ತು ರಾತ್ರಿ ತಪ್ಪದೇ ಬ್ರಷ್ ಮಾಡಬೇಕು ಎಂದು ಪುಟ್ಟ ಮಕ್ಕಳಿಗೆ ಕಿವಿಮಾತು ಹೇಳಿದರು. ಜೊತೆಗೆ  ಹಲ್ಲಿನ ಮಾದರಿ ತೋರಿಸಿ, ಪ್ರಾಯೋಗಿಕವಾಗಿ ಹಲ್ಲು ಉಜ್ಜುವ ಪದ್ಧತಿಯನ್ನು ತಿಳಿಸಿಕೊಟ್ಟರು. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಸೊಪ್ಪು, ತರಕಾರಿ, ಹಣ್ಣು,  ರಾಗಿ ಮುದ್ದೆಯಂತಹ  ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಂತರ ಎಲ್ಲಾ ಮಕ್ಕಳ ವೈಯಕ್ತಿಕವಾಗಿ ಹಲ್ಲುಗಳನ್ನು ಪರೀಕ್ಷಿಸಿ, ಆರೋಗ್ಯ ತಪಾಸಣೆ ಮಾಡಿದರು, ಅಷ್ಟೇ ಅಲ್ಲದೇ ಎಲ್ಲಾ ಮಕ್ಕಳಿಗೆ ಉಚಿತವಾಗಿ ಟೂತ್ ಪೇಸ್ಟ್ ನೀಡಿದರು, ಹಲ್ಲುಗಳ ಹೆಚ್ಚಿನ  ಆರೋಗ್ಯದ ಸಲಹೆ ತಿಳಿದುಕೊಳ್ಳಲು  ಪಾಲಕರು ತಮ್ಮನ್ನು ಕಾಣುವಂತೆ ಮಕ್ಕಳಿಗೆ ತಿಳಿ ಹೇಳಿದರು. 

ಈ ಶಿಬಿರದ ಕಾರ್ಯಗಾರದಲ್ಲಿ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ, ಶಿಕ್ಷಕ/ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.