ಪಡುಬಿದ್ರಿ: ಅದಾನಿ ಪವರ್ ಲಿಮಿಟೆಡ್ ಉಡುಪಿ ಟಿಪಿಪಿ ಸಂಸ್ಥೆ ತನ್ನ ಸಿಎಸ್‌ಆರ್ ಯೋಜನೆಯಡಿ ಬಡಾ ಗ್ರಾಪಂ ಮೂಲಸೌಕರ್ಯ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಹಂತ ಹಂತವಾಗಿ ಪಂಚಾಯಿತಿ ನೀಡುವ ಕ್ರಿಯಾಯೋಜನೆಯಂತೆ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಅದಾನಿ ಸಮೂಹ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಉಚ್ಚಿಲದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಸಾರ್ವಜನಿಕ ಮಾರುಕಟ್ಟೆ ಸಂಕೀರ್ಣ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈವರೆಗೆ ಬಡಾ ಗ್ರಾಪಂ ವ್ಯಾಪ್ತಿಯಲ್ಲಿ 1.19 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕೆಲಸ ಅದಾನಿ ಫೌಂಡೇಶನ್ ಪೂರ್ಣಗೊಳಿಸಿದೆ. ಮಾರುಕಟ್ಟೆ ಸಂಕೀರ್ಣದಿಂದ ಜನರಿಗೆ ಹಾಗೂ ಮಾರಾಟಗಾರರಿಗೆ ಅನುಕೂಲವಾಗಲಿದ್ದು, ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಪ್ರಮುಖ ಅಂಶವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮೆಂಡನ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ದೀಪಕ್ ಎರ್ಮಾಳು, ಸದಸ್ಯರಾದ ರಮೇಶ್ ಅಂಚನ್, ಚಂದ್ರಶೇಖರ ಕೋಟ್ಯಾನ್, ಹರಿಪ್ರಸಾದ್, ಇಂದಿರಾ ಶೆಟ್ಟಿ, ಮೋಹಿನಿ, ಕಲಾವತಿ, ನಿರ್ಮಲಾ ರಾಕೇಶ್, ತಾಪಂ ಮಾಜಿ ಉಪಾಧ್ಯಕ್ಷ ಯು.ಸಿ.ಶೇಖಬ್ಬ, ಪಿಡಿಒ ಸತೀಶ್, ಅದಾನಿ ಪವರ್ ಲಿಮಿಟೆಡ್ ಏಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಶನ್ ಅನುದೀಪ್ ಉಪಸ್ಥಿತರಿದ್ದರು.
ಹಲವಾರು ವರ್ಷಗಳಿಂದ ಕೋರ್ಟ್ ವ್ಯಾಜ್ಯದ ಕಾರಣದಿಂದ ನೆನೆಗುದಿಗೆ ಬಿದ್ದಿದ್ದ ಬಹುಬೇಡಿಕೆ ಮಾರುಕಟ್ಟೆ ಕಟ್ಟಡ ಕಾಮಗಾರಿಗೆ, ಸಾರ್ವಜನಿಕರ ವಿಶ್ವಾಸ ಸಂಪಾದಿಸಿ ಇದೀಗ ಹೊಸ ಶಕ್ತಿಯೊಂದಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಯನ್ನು ಅದಾನಿ ಸಮೂಹ ತನ್ನ ಸಿಎಸ್‌ಆರ್ ಯೋಜನೆಯಡಿ ಕೈಗೆತ್ತಿಕೊಳ್ಳುತ್ತಿರುವುದು ಸಂತಸ. -ಶಿವಕುಮಾರ್ ಮೆಂಡನ್ ಗ್ರಾಪಂ ಅಧ್ಯಕ್ಷ https://www.vijayavani.net/land-security-scheme-benefits-the-public https://www.vijayavani.net/kachur-mulakshetra-fair-from-17th