ರಾಯಚೂರಿನ ಯಕ್ಲಾಸಪುರ ಸೀಮಾಂತರದಲ್ಲಿರುವ ಗೈರಾಣಿ ಜಮೀನನ್ನು ಪರಿಶಿಷ್ಟ ಜಾತಿಯ ಸ್ಮಶಾನಕ್ಕೆ ಮಂಜೂರು ಮಾಡುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಜಿ.ನರಸಿಂಹಲು, ಪದಾಕಾರಿಗಳಾದ ಹೇಮರಾಜ ಅಸ್ಕಿಹಾಳ, ವೆಂಕಟಸ್ವಾಮಿ, ನರಸಿಂಹಲು ಪೋತಗಲ್, ಉರುಕುಂದಪ್ಪ, ತಾಯಣ್ಣ ಇದ್ದರು. 
ಜಿಲ್ಲೆ

ಪರಿಶಿಷ್ಟ ಜಾತಿ ಜನಾಂಗದ ಸ್ಮಶಾನಕ್ಕೆ ಭೂಮಿ ನೀಡಿ

ರಾಯಚೂರು: ನಗರದ ಯಕ್ಲಾಸಪುರ ಸೀಮಾಂತರದಲ್ಲಿರುವ ಸರ್ವೆ ನಂ.73/2ರಲ್ಲಿರುವ 7.24 ಎಕರೆ ಗೈರಾಣಿ ಭೂಮಿಯನ್ನು ಪರಿಶಿಷ್ಟ ಜಾತಿ ಜನಾಂಗದ ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ಮಾದಿಗ ದಂಡೋರಾ ಒತ್ತಾಯಿಸಿದೆ.
ಸಂಘಟನೆ ನಿಯೋಗ ಸ್ಥಳೀಯ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಸೋಮವಾರ ಮನವಿ ಸಲ್ಲಿಸಿ, ಹಲವು ವರ್ಷಗಳಿಂದ ಎಸ್ಸಿ ಜನಾಂಗದ ಸ್ಮಶಾನಕ್ಕೆ ಭೂಮಿ ಒದಗಿಸುವಂತೆ ಮನವಿ ಮಾಡುತ್ತಾ ಬಂದಿದ್ದರೂ, ಮುಸ್ಲಿಂ ಸಮುದಾಯದ ಖಬರಸ್ತಾನ್‌ಗೆ ಭೂಮಿ ಮಂಜೂರು ಮಾಡಲಾಗಿದೆ ಎಂದು ದೂರಿದರು.
ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನಕ್ಕೆ ಜಮೀನು ನೀಡುವಂತೆ ಕಳೆದ ಆರೇಳು ವರ್ಷದಿಂದ ಮನವಿ ಮಾಡುತ್ತಾ ಬರಲಾಗುತ್ತದೆ. ಆದರೆ ಒಂದು ಕೋಮಿನ ಒತ್ತಡಕ್ಕೆ ಮಣಿದು ಭೂಮಿಯನ್ನು ನೀಡಿರುವುದು ಸರಿಯಲ್ಲ. ಕೂಡಲೇ ಆದೇಶವನ್ನು ರದ್ದುಪಡಿಸಿ ಎಸ್ಸಿ ಜನಾಂಗದ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಿ.ನರಸಿಂಹಲು, ಪದಾಕಾರಿಗಳಾದ ಹೇಮರಾಜ ಅಸ್ಕಿಹಾಳ, ವೆಂಕಟಸ್ವಾಮಿ, ನರಸಿಂಹಲು ಪೋತಗಲ್, ಉರುಕುಂದಪ್ಪ, ತಾಯಣ್ಣ ಇದ್ದರು.