ಜಿಲ್ಲೆ

ಪಿಎಲ್​ಡಿ ಬ್ಯಾಂಕ್​ನಲ್ಲಿ ಮೈತ್ರಿ ಮೇಲುಗೈ

ಕೋಲಾರ ಡೆಸ್ಕ್

 ಕೋಲಾರ: ತಾಲೂಕಿನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ನ (ಪಿಎಲ್​ಡಿ) ಆಡಳಿತ ಮಂಡಳಿಯ 14 ಸ್ಥಾನಗಳಿಗೆ ನಗರದಲ್ಲಿ ಭಾನುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಮೈತ್ರಿ ಮೇಲುಗೈ ಸಾಧಿಸಿತು.

ಒಟ್ಟು 14 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್​&-ಬಿಜೆಪಿ ಮೈತ್ರಿಗೆ 6 ಸ್ಥಾನ ಹಾಗೂ ಕಾಂಗ್ರೆಸ್​ಗೆ 4 ಸ್ಥಾನ ಸಿಕ್ಕಿದ್ದು, ಜೆಡಿಎಸ್​ ಅಧಿಕಾರ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿಯಾಗಿದೆ.

ಈ ಮೊದಲೇ ಅವಿರೋಧ ಆಯ್ಕೆಯಾಗಿದ್ದ 4 ಸ್ಥಾನಗಳಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ಗೆ ತಲಾ ಎರಡು ಸ್ಥಾನ ಲಭ್ಯವಾಗಿದ್ದು, ಚುನಾವಣೆಯಲ್ಲಿ ಜೆಡಿಎಸ್​ ಬೆಂಬಲದಿಂದ ಕಣಕ್ಕಿಳಿದಿದ್ದ 6 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇನ್ನು ಕಾಂಗ್ರೆಸ್​ 4 ಸ್ಥಾನಗಳನ್ನು ಗಳಿಸಿದ್ದು, ಇಷ್ಟಕ್ಕೆ ತೃಪ್ತಿ ಪಡೆದುಕೊಂಡಿದೆ.

ಹೋಳೂರು ಸಾಮಾನ್ಯ ಕ್ಷೇತ್ರದಿಂದ ಎನ್​.ಜಿ.ಬ್ಯಾಟಪ್ಪ 29, ಉತ್ತರ ಕಸಬಾ ಸಾಮಾನ್ಯ ಕ್ಷೇತ್ರದಲ್ಲಿ ಯಲವಾರ ಸೊಣ್ಣೇಗೌಡ 26, ವಕ್ಕಲೇರಿ ಸಾಮಾನ್ಯ ಕ್ಷೇತ್ರದಲ್ಲಿ ಚಿಕ್ಕಹಸಾಳ ಎಂ.ಮಂಜುನಾಥ್​ 26, ತೊಟ್ಲಿ ಸಾಮಾನ್ಯ ಕ್ಷೇತ್ರದಲ್ಲಿ ವೆಲಗಲಬುರ್ರೆ ಗ್ರಾಮದ ವಿ.ಎ.ಶಶಿಧರ್​ 37, ವೇಮಗಲ್​ ಸಾಮಾನ್ಯ ಕ್ಷೇತ್ರದಲ್ಲಿ ಕುರಗಲ್​ ಕೆ.ಎಂ.ವೆಂಕಟೇಶಪ್ಪ 16, ನರಸಾಪುರ ಸಾಮಾನ್ಯ ಕ್ಷೇತ್ರದಲ್ಲಿ ಕಲ್ವ ಗ್ರಾಮದ ಟಿ.ಕೆ.ಬೈರೇಗೌಡ 30, ವಡಗೂರು ಹಿಂದುಳಿದ ವರ್ಗದ ಕ್ಷೇತ್ರದಲ್ಲಿ ಅಬ್ಬಣಿ ವೆಂಕಟರಾಮಪ್ಪ 18, ದಕ್ಷಿಣ ಕಸಬಾ ಮೀಸಲು ಕ್ಷೇತ್ರದಲ್ಲಿ ದೊಡ್ಡಹಸಾಳದ ಅಂಬಿಕಾ 40, ಸುಗಟೂರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬೊಮ್ಮಸಂದ್ರ ಮುನಿರತ್ನಮ್ಮ 19, ಸಾಲಗಾರರಲ್ಲದ ಕ್ಷೇತ್ರದಲ್ಲಿ ರವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮುಂರಾಂಡಹಳ್ಳಿ ಗೋಪಾಲಪ್ಪ ಅವರ ಪುತ್ರ ಜಿ.ನರೇಶಬಾಬು 297 ಮತ ಪಡೆದು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟಾರೆ 6 ಮತಗಳು ತಿರಸತಗೊಂಡಿವೆ.

ಟ್ರ್ಯಾಕ್ಟರ್​, ಬುಲೆಟ್​, ಕಾರಿಗೆ ಯಾಮಾರಿದ ಕಾಲ ಬದಲು

ಕೋಲಾರ: ಜೆಡಿಎಸ್​&ಬಿಜೆಪಿ ಮೈತ್ರಿಯಿಂದ ಪಿಎಲ್​ಡಿ ಬ್ಯಾಂಕ್​ ಚುನಾವಣೆ ಎದುರಿಸಿದ್ದು, ಬಹುಮತ ಪಡೆದುಕೊಂಡಿದ್ದೇವೆ, ಇದು ಆಡಳಿತ ಪಕ್ಷಕ್ಕೆ ಎಚ್ಚರಿಕೆ ಎಂದು ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಹೇಳಿದರು.

ನಗರದ ಕಚೇರಿಯಲ್ಲಿ ಭಾನುವಾರ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ, ಲೋಕಸಭೆ ಚುನಾವಣೆಯಿಂದ ಎಲ್ಲ ಚುನಾವಣೆಗಳಲ್ಲಿಯೂ ಜಯಶೀಲರಾಗಿದ್ದೇವೆ, ಗೆಲುವಿಗೆ ಮುಖಂಡರಷ್ಟೆ ಕಾರ್ಯಕರ್ತರೂ ಶ್ರಮಿಸಿದ್ದಾರೆ ಎಂದರು.

ವಿರೋಧ ಪಕ್ಷದವರು ಅಧಿಕಾರಕ್ಕಾಗಿ ಘೋಷಣೆ ಚಪ್ಪಾಳೆ, ಶಿಳ್ಳೆಗೆ ಸೀಮಿತ. ಗ್ಯಾರಂಟಿ ತಲುಪಿಸುವಲ್ಲಿ ವಿಫಲ, ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ. ಲಂಚಮುಕ್ತ ಮಾಡುತ್ತೇವೆ ಎಂದರು, ಆದರೆ ಭ್ರಷ್ಟಾಚಾರ ತುಂಬಿತುಳುಕುತ್ತಿವೆ. ಟ್ರ್ಯಾಕ್ಟರ್​, ಬುಲೆಟ್​, ಕಾರ್​ಗೆ ಯಾಮಾರಿದ್ದ ಕಾಲ ಮುಗಿಯಿತು ಎಂದು ಲೇವಡಿ ಮಾಡಿದರು.

ಅರ್ಹ ಮತದಾರರು 988 ಇದ್ದರು ಅಂತಿಮವಾಗಿ. ಎಷ್ಟೇ ಆಮಿಷ ಒಡ್ಡಿದರೂ, ಹಣ ಬಲ, ತೋಳ್ಬಲ ಎಲ್ಲ ಪ್ರದರ್ಶಿಸಿದರೂ ನಮ್ಮ ಕಾರ್ಯಕರ್ತರು, ಜನರಿಂದ ಜಯವಾಗಿದೆ. 10ರಲ್ಲಿ 6 ಕ್ಷೇತ್ರಗಳಲ್ಲಿ ಗೆದ್ದಿದ್ದು ಕೆಲವು ಕ್ಷೇತ್ರಗಳಲ್ಲಿ ಕೆಲವೇ ಮತಗಳ ಅಂತರದಿಂದ ಸೋಲಾಗಿದೆ ಎಂದು ತಿಳಿಸಿದರು.

ಚುನಾವಣೆಗೂ ಮೊದಲೆ ವಿಟ್ಟಪ್ಪನಹಳ್ಳಿ ವೆಂಕಟೇಶ್​, ಶಿವಕುಮಾರ್​ ಅವಿರೊಧ ಆಯ್ಕೆಯಾಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿಯೂ ಇದೇ ರೀತಿ ಜವಾಬ್ದಾರಿ ವಹಿಸಿಕೊಂಡು ಮೈತ್ರಿ ಪಾಲಾಗಿಸಿಕೊಳ್ಳಬೇಕು ಎಂದರು.

ಜೆಡಿಎಸ್​ ಜಿಲ್ಲಾ ಕಾರ್ಯಾಧ್ಯಕ್ಷ ನಟರಾಜ್​, ತಾಲೂಕು ಅಧ್ಯಕ್ಷ ಬಾಬು ಮೌನಿ, ನಗರಸಭೆ ಸದಸ್ಯ ರಾಕೇಶ್​, ಬಿಜೆಪಿ ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್​, ಬಂಕ್​ ಮಂಜುನಾಥ್​ ಹಾಜರಿದ್ದರು.

ಕಾಂಗ್ರೆಸ್​ಗೆ ಬೋಣಿಯಾಗಲು ಬಿಡಲ್ಲ

ಜತೆಜತೆಯಾಗಿ ತೆರಳಿದ ಕಾರಣ ಚುನಾವಣೆಯಲ್ಲಿ ಜಯಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆಯಲ್ಲಿ ನಾವು ಹೀಗೇ ಇರುತ್ತೇವೆ. ಜಿಪಂ, ತಾಪಂನಲ್ಲಿ ಕಾಂಗ್ರೆಸ್​ಗೆ ಬೋಣಿಯಾಗಲೂ ಬಿಡೋದಿಲ್ಲ ಎಂದು ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ಘೋಷಿಸಿದರು. ನಾನು, ಸಿಎಂಆರ್​ ಕರೆ ಕೊಟ್ಟರೆ 50 ಸಾವಿರ ಜನರು ರ್ಬತಾರೆ ಹುಷಾರು. ಸಾಬರ ಓಟು ಇಟ್ಕೊಂಡು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ ಎಚ್ಡಿಕೆ, ಬಿಎಸ್​ವೈ ತೀಮಾರ್ನಕ್ಕೆ ನಾವೆಲ್ಲರೂ ಬದ್ಧ ಎಂದು ತಿಳಿಸಿದರು.