ಬೈಲಹೊಂಗಲ: ಉಗರಖೋಡ ಹಾಲು ಉತ್ಪಾದಕರ ಸಹಕಾರ ಒಕ್ಕೂಟದಲ್ಲಿ ಮಾಜಿ ಕಾರ್ಯದರ್ಶಿ ಈರಣ್ಣ ಕೊತ್ತಲಮನಿ ಹಾಗೂ ಸಂದ ಅಧ್ಯ ಶಂಕ್ರೆಪ್ಪ ತಿಗಡಿ ಮತ್ತು ಕೆಲ ಆಡಳಿತ ಮಂಡಳಿ ಸದಸ್ಯರು 15 ಲ ರೂ.ಕ್ಕೂ ಹೆಚ್ಚು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ರೆತ ಸಂಗಳ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಸಹಕಾರ ಸಂಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ್ಗೆ ಮನವಿ ಸಲ್ಲಿಸಲಾಯಿತು.
ಸಹಕಾರ ಸಂಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ್ ಮಾತನಾಡಿ, ಉಗರಖೋಡ ಒಕ್ಕೂಟದಲ್ಲಿ ಅವ್ಯವಹಾರ ವಿಷಯ ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕೆಂದು ಬೆಳಗಾವಿ ಹಾಲು ಒಕ್ಕೂಟದ ಕಿತ್ತೂರು ಉಪಕೇಂದ್ರದ ವಿಸ್ತರಣಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಮುಲಾಜಿಲ್ಲದೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು. ಒಕ್ಕೂಟದ ಅಧ್ಯ ಬೀರಪ್ಪ ದೇಶನೂರ, ರೆತ ಮುಖಂಡರಾದ ಬಸವರಾಜ ಮೊಖಾಶಿ, ಸಂಜೀವಕುಮಾರ ತಿಲಗರ, ಉಳವಯ್ಯ ನಿಂಗಣ್ಣವರ ಮಾತನಾಡಿ, ಸಹಕಾರ ಅಧಿಕಾರಿಗಳು, ಮೇಲ್ವಿಚಾರಕರು, ಅವ್ಯವಹಾರ ನಡೆದರೂ ಯಾವುದೇ ಕ್ರಮ ಕೆಗೊಂಡಿಲ್ಲ. ಲೆಕ್ಕಪರಿಶೋಧನೆ ಸರಿಯಾಗಿ ಮಾಡಿಲ್ಲವೆಂದು ಆರೋಪಿಸಿದರು.
ಮುಖಂಡರಾದ ಸುರೇಶ ವಾಲಿ, ನಿಂಗಪ್ಪ ಹಣಜಿ, ಮಲ್ಲಯ್ಯ ಪೂಜಾರ, ರಾಜಶೇಖರ ಅಂಗಡಿ, ಮೌಲಾಲಿ ಮಕಾನದಾರ್, ರಾಮನಗೌಡ ಪಾಟೀಲ, ವಿನೋದ ಹಿರೇಮಠ, ಉಮೇಶ ಕಾದ್ರೊಳ್ಳಿ, ಈರಣ್ಣ ಅಂಗಡಿ, ದ್ಯಾಮಣ್ಣ ಹುದ್ಲಿ, ರುದ್ರಪ್ಪ ಕೊಡ್ಲಿ, ಸಿದ್ದಪ್ಪ ದೊಡವಾಡ, ಮಹಾಂತೇಶ ಇಟ್ನಾಳ, ಅದಶ್ಯ ಬೆಳ್ಳಿಕಟ್ಟಿ ಇತರರಿದ್ದರು.