ಜಿಲ್ಲೆ

ಮನೆ ನಿರ್ಮಾಣಕ್ಕೆ ಕಿರುಕುಳ ಆರೋಪ

ಎನ್.ವೆಂಕಟೇಶ್

ಚಿಕ್ಕಬಳ್ಳಾಪುರ/ಶಿಡ್ಲಟ್ಟ: ತಾಲೂಕಿನ ಚೀಮಂಗಲದಲ್ಲಿನ ಮನೆಯ ಮೇಲೆ ಕಟ್ಟಡ ನಿರ್ಮಾಣಕ್ಕೆ ವಿನಾ ಕಾರಣ ಕಿರುಕುಳ ನೀಡುತ್ತಿರುವ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರ ವಿರುದ್ಧ ಜಾಗದ ಮಾಲೀಕ ದೇವರಾಜ್​ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಸ್ಥಳಿಯವಾಗಿ ಆೇಪಣೆಯ ಯಾವುದೇ ದೂರುಗಳು ಸಲ್ಲಿಕೆಯಾಗದಿದ್ದರೂ ಸ್ಥಳಕ್ಕೆ ಪೊಲೀಸ್​ ಸಿಬ್ಬಂದಿ ನಿರಂತರವಾಗಿ ಬಂದು ಕೆಲಸ ಸ್ಥಗಿತಗೊಳಿಸುವ, ಪರಿಕರಗಳನ್ನು ಬಿಸಾಡುವ ಧೋರಣೆಯನ್ನು ಪ್ರದರ್ಶಿಸುತ್ತಿದ್ದು ಇದಕ್ಕೆ ಕಾಣದ ಪ್ರಭಾವಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನಲ್ಲೆನಿದೆ?

ಚೀಮಂಗಲದಲ್ಲಿನ ಸ್ವಯಾರ್ಜಿತ ಜಾಗದಲ್ಲಿ ಗ್ರಾಪಂ ವತಿಯಿಂದ ಅನುಮತಿ ಪಡೆದು ಮನೆ ನಿರ್ಮಿಸಲಾಗಿದೆ. ಇಲ್ಲಿಯೇ 15 ವರ್ಷಗಳಿಂದ ಕುಟುಂಬ ಸಮೇತ ವಾಸವಿದ್ದು, ಇದರ ಮೇಲೆ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಸ್ಥಳಿಯ ಗ್ರಾಪಂ ಸದಸ್ಯರು, ಪ್ರಭಾವಿ ಮುಖಂಡರು ಸ್ಥಳಕ್ಕೆ ಬಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದು, ಇದರ ನಡುವೆ ಪೊಲೀಸ್​ ಸಿಬ್ಬಂದಿ ಸಹ ಸ್ಥಳಕ್ಕೆ ಬಂದು ಕೆಲಸವನ್ನು ಸ್ಥಗಿತಗೊಳಿಸಲು ಒತ್ತಡ ಹೇರುತ್ತಿದ್ದಾರೆ. ಆದರೆ, ದೂರು ದಾಖಲಾದರೂ ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ದೇವರಾಜ್​ ಮನವಿ ಮಾಡಿದ್ದಾರೆ.