ಜಿಲ್ಲೆ

ಆರ್‌ಎಸ್‌ಎಸ್ ಮೇಲಿನ ಆರೋಪ ಸುಳ್ಳಿನ ಕಂತೆ

ಕೃಷ್ಣ ಕುಲಕರ್ಣಿ

ಸೇಡA: ಮಾಜಿ ಶಾಸಕ ಗೂಳಿಹಟ್ಟಿ ಶೇಖರ ಅವರು ಇತ್ತೀಚೆಗೆ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಮೇಲೆ ಮಾಡಿದ ಆರೋಪ ಸುಳ್ಳಿನ ಕಂತೆಯಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ವಿಜಯಕುಮಾರ ಆಡಕಿ ದೂರಿದರು.

ಭಾರತದಲ್ಲಿ ಸಮ ಸಮಾಜ ನಿರ್ಮಾಣ ಮಾಡುವುದು ಹಾಗೂ ಎಲ್ಲರೂ ಒಂದೇ ಎನ್ನುವ ತತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಂಘಟನೆ ಆರ್‌ಎಸ್‌ಎಸ್ ಆಗಿದೆ. ಆದರೆ ಗೂಳಿಹಟ್ಟಿ ಶೇಖರ್ ಅವರು ನಾಗಪುರದಲ್ಲಿನ ಸ್ಮಾರಕದ ಒಳ ಬಿಟ್ಟಿಲ್ಲ ಎನ್ನುವ ಮೂಲಕ ಸಂಘದ ಬಗ್ಗೆ ಇಲ್ಲದ ಮಾತುಗಳನ್ನಾಡುತ್ತಿರುವುದು ಖಂಡನೀಯ. ಆರೆಸ್ಸೆಸ್ ಕೇಂದ್ರ ಕಚೇರಿ ಸೇರಿ ಸಂಘದ ಯಾವುದೇ ಕಚೇರಿಯಲ್ಲಿ ಜಾತಿ ಕೇಳಿ ಒಳಗೆ ಬಿಡುವ ಪದ್ಧತಿಯಿಲ್ಲ. ನಾನು ಒಬ್ಬ ಮಾದಿಗ ಸಮಾಜದವನಾಗಿ ಅನೇಕ ಬಾರಿ ಸಂಘದ ಕಚೇರಿಗೆ ಹೋಗಿz್ದೆÃನೆ. ಅಲ್ಲಿರುವ ಎಲ್ಲರೂ ನನಗೆ ಕುಟುಂದ ಸದಸ್ಯನಂತೆ ಕಂಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗೂಳಿಹಟ್ಟಿ ಅವರು ಒಂದೆರಡು ಬೈಠಕ್‌ನಲ್ಲಿ ಭಾಗಿಯಾದರೆ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಪರಿಶಿಷ್ಟರಿಗೆ ಸಂಘದಲ್ಲಿ ಬೆಲೆ ಇಲ್ಲ ಎನ್ನುವ ಮಾತುಗಳನ್ನಾಡಿದ್ದಾರೆ. ನಿಮ್ಮ ರಾಜಕೀಯಕ್ಕಾಗಿ ಸಂಘವನ್ನು ತೆಗೆಳಬೇಡಿ. ಪ್ರಿಯಾಂಕ್ ಅವರೂ ಸಂಘದ ಕಚೇರಿಗೆ ಬಂದರೆ ನಾನೇ ಕರೆದುಕೊಂಡು ಹೋಗಿ ಅಲ್ಲಿನ ವ್ಯವಸ್ಥೆ ತೋರಿಸುತ್ತೇನೆ ಎಂದರು.

ಪುರಸಭೆ ಸದಸ್ಯ ಬಸಣ್ಣ ರನ್ನೇಟ್ಲಾ, ಗ್ರಾಪಂ ಸದಸ್ಯ ರವಿ ಹಾಬಾಳ, ಮಾದಿಗ ಸಮಾಜದ ಮುಖಂಡರಾದ ರಾಮು ಕಣೇಕಲ್, ಭೀಮಾಶಂಕರ ಕೊರವಿ, ರವಿ ಸಾತನೂರ, ಅಶೋಕ ಕೊಡದೂರ, ಅನೀಲ ರನ್ನೇಟ್ಲಾ ಇದ್ದರು.