ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಶಿವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಆಡಳಿತ ಮಂಡಳಿ ಆಯ್ಕೆಗೆ ಕಾನೂನು ಬಾಹಿರವಾಗಿ ತರಾತುರಿಯಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದು ಸಂಘದ ಸದಸ್ಯರು ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಸದಸ್ಯರಾದ ಕಲ್ಲಪ್ಪ ಕಾಳೆ, ಶಿವಾನಂದ ಮುದ್ದಿ, ಬಸವರಾಜ ಹುಬ್ಬಳ್ಳಿ, ವಿ.ಎಂ. ವಸ್ತçದ, ಮೂಗಪ್ಪ ಬಿಲ್ಲಿಂಗನವರ, ಜಯಪ್ಪ ಮುದ್ದಿ, ಪರಮೇಶ್ವರ ಕಾಳೆ ಹಾಗೂ ಇತರರು ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.
ಶಿವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಾಕಿ ಉಳಿಸಿಕೊಂಡಿರುವುದು ಮತ್ತು ಆಡಿಟ್ ಮಾಡಿಸದಿರುವುದು, ಇತರ ಆಡಳಿತಾತ್ಮಕ ವಿಚಾರವಾಗಿ ಸಂಘವನ್ನು ಸೂಪರ್‌ಸೀಡ್ ಮಾಡಲಾಗಿತ್ತು. ತರಾತುರಿಯಲ್ಲಿ ಚುನಾವಣೆ ಮಾಡುತ್ತಿರುವುದನ್ನು ವಿರೋಧಿಸಿ ಸಂಘದ ಸದಸ್ಯ ಕಲ್ಲಪ್ಪ ಕಾಳೆ ಉಪ ನಿಬಂಧಕರಿಗೆ ದೂರು ನೀಡಿದ್ದರು. ಅರ್ಜಿ ಪರಿಶೀಲಿಸಿದ್ದ ಉಪ ನಿಬಂಧಕರು, ಚುನಾವಣೆಗೆ 195 ದಿನ ಮೊದಲು ನೋಟಿಸ್ ನೀಡಿ ಚುನಾವಣೆ ನಡೆಸುವಂತೆ ಆದೇಶಿಸಿದ್ದರು.
ಉಪ ನಿಬಂಧಕರ ಆದೇಶ ಪ್ರಶ್ನಿಸಿ ಆಡಳಿತ ಮಂಡಳಿಯ ಶಂಕರ ಮುಗದ, ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣಾ ಹಂತದಲ್ಲಿದ್ದಾಗ ಸಂಘದ ಆಡಳಿತ ಅವಽ ಜ. 5ರಂದು ಮುಕ್ತಾಯವಾಗಿದ್ದರಿಂದ ಇಲಾಖೆಯ ಮಧುಸೂದನ ಎಂಬುವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಉಪ ನಿಬಂಧಕರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡದಿರುವುದರಿಂದ ಹತಾಶರಾದ ಸಂಘದವರು, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದ ತಡೆಯಾಜ್ಞೆ ಮಾಡಿಸಿದ್ದರು. ಎಲ್ಲ ಬೆಳವಣಿಗೆಯ ನಂತರ ಹೈಕೋರ್ಟ್, ಸಹಕಾರ ನಿಯಮಗಳ ಅನ್ವಯ ಚುನಾವಣೆ ನಡೆಸುವಂತೆ ಆದೇಶಿಸಿದೆ.
ಆದಾಗ್ಯೂ ಉಪ ನಿಬಂಧಕರು ರಮೇಶ ಬಗರಿ ಅವರು ನ್ಯಾಯಾಲಯದ ಆದೇಶ ಮತ್ತು ನಿಯಮಾವಳಿ ಉಲ್ಲಂಘಿಸಿ ಆಡಳಿತಾಽಕಾರಿಯಾಗಿದ್ದ ಮಧುಸೂದನ ಅವರನ್ನೇ ಚುನಾವಣಾ ಅಽಕಾರಿಯನ್ನಾಗಿ ನೇಮಕ ಮಾಡಿ ಚುನಾವಣೆ ನಡೆಸುತ್ತಿದ್ದಾರೆ. 13 ಸದಸ್ಯರ ಆಯ್ಕೆಗೆ ಮೇ 16ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. 31ರಂದು ಮತ ಎಣಿಕೆ ಮತ್ತು ಫಲಿತಾಂಶ ನಿಗದಿಯಾಗಿದೆ. ಚುನಾವಣಾ ವೇಳಾಪಟ್ಟಿಯನ್ನು ಕನಿಷ್ಠ 7 ದಿನ ಮುಂಚೆ ಜಾರಿ ಮಾಡದೆ, ಮೇ 17ರಿಂದ ಸದಸ್ಯರಿಗೆ ನೋಟಿಸ್ ನೀಡುತ್ತಿದ್ದಾರೆ. ಕರ್ನಾಟಕ ಸಹಕಾರ ಕಾಯ್ದೆ 1959ರ ಅಡಿ ಹಿಂದಿನ ಆಡಳಿತ ಮಂಡಳಿಯ 13 ಸದಸ್ಯರು ಸ್ಪಽðಸಲು ಅನರ್ಹರಾಗಿದ್ದಾರೆ. ಆದಾಗ್ಯೂ ನಾಮಪತ್ರ ಸಲ್ಲಿಸಿದ್ದು, ಅವುಗಳನ್ನು ತಿರಸ್ಕರಿಸಬೇಕು. ನ್ಯಾಯಾಲಯದ ಆದೇಶದ ವಿರುದ್ಧ ಚುನಾವಣೆ ನಡೆಸುತ್ತಿರುವ ಡಿಆರ್‌ಸಿಎಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.