ಜಿಲ್ಲೆ

ಕಿರೇಸೂರಲ್ಲಿ ಅಲ್ಲಮಪ್ರಭು ಜಾತ್ರೆ

Dharwada - Basavaraj Idli

ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಅಗಿ ಹುಣ್ಣಿಮೆಯಂದು ಶ್ರೀ ಅಲ್ಲಮ ಪ್ರಭುದೇವರ ಜಾತ್ರಾ ಮಹೋತ್ಸವ ಇತ್ತೀಚೆಗೆ ಜರುಗಿತು.

ಕಡಬಿನ ಕಾಳಗದ ದಿನದಂದು ಹೊಸಳ್ಳಿಯ ಶ್ರೀ ಅಭಿನವ ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಿತು.

ಗ್ರಾಮದ ಕವಿಗಳಾದ ಗುರುಶಾಂತಯ್ಯ ಪ್ರಭುಸ್ವಾಮಿಮಠ ಅವರು ಬರೆದ ಶ್ರೀ ಸದ್ಗುರು ಆರೂಢದ್ವಯರ ಪವಾಡ ಪದಗಳು ಎಂಬ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ಕಳೆದ ವರ್ಷ ಇದೇ ಕವಿಗಳ "ಪರಮ ಪ್ರಭುದೇವ' ಎಂಬ ನಾಟಕ ಕೃತಿ ಬಿಡುಗಡೆಯಾಗಿತ್ತು.