ಸವದತ್ತಿ: ಇಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ದೇವಸ್ಥಾನದ ಚೈನ್ ಗೇಟ್, 80 ೂಟ್ ರಸ್ತೆ, ರಿಂಗ್ ರೋಡ್ ಸೇರಿ ಹಲವಡೆ ಅನಧಿಕೃತ ಮಳಿಗೆ ಹಾಗೂ ಗೂಡಂಗಡಿಗಳ ತೆರವು ಕಾರ್ಯಾಚರಣೆ ಗುರುವಾರ ನಡೆಯಿತು.
ಉಗರಗೋಳ ಗ್ರಾಪಂ ವ್ಯಾಪ್ತಿಯ ಜಾಗದಲ್ಲಿ ತೆರವಿಗೆ ಮುಂದಾಗಿದ್ದರಿಂದ ವಿರೋಧ ವ್ಯಕ್ತವಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ತೆರವು ಕಾರ್ಯಚಾರಣೆ ವೇಳೆ ಅಧಿಕಾರಿಯೋರ್ವರು ಜಾತಿ ನಿಂದನೆ ಹಾಗೂ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿದ್ದಾರೆ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಪಿಐ ಧರ್ಮಾಕರ ಧರ್ಮಟ್ಟಿ ಮೂಲಕ ಎಸ್ಪಿಗೆ ಮನವಿ ಸಲ್ಲಿಸಿದರು.
ತೆರವು ತಾತ್ಕಾಲಿಕ ಸ್ಥಗಿತ: ದೇವಸ್ಥಾನದ 88 ಎಕರೆ ಜಾಗ ಸರ್ವೇ ಮಾಡಿಸಬೇಕು. ಅಲ್ಲಿಯವರೆಗೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ದೇವಸ್ಥಾನದ ಮುಂದೆ ಸಾವಿರಾರು ವ್ಯಾಪಾರಸ್ಥರು ಪಟ್ಟು ಹಿಡಿದರು. ಹೀಗಾಗಿ, ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಸ್ಥಳದಲ್ಲಿ ಜಮಾಯಿಸಿದ ಜನರು ಮತ್ತು ಅಂಗಡಿಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಗ್ರಾಪಂ ಅಧ್ಯ ಮಂಜುನಾಥ ಕಾಳಪ್ಪನವರ ಮಾತನಾಡಿ, ಗ್ರಾಪಂಗೆ ಯಾವುದೇ ಮಾಹಿತಿ ನೀಡದೆ ಪ್ರಾಧಿಕಾರದಿಂದ ತೆರವು ಕಾರ್ಯಾಚರಣೆ ನಡೆದಿದೆ. ದೇವಸ್ಥಾನದ 88 ಎಕರೆ ಜಾಗ ಹೊರತುಪಡಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗೈರಾಣು ಜಾಗೆ ಕುರಿತು ನ್ಯಾಯಾಲಯದಲ್ಲಿನ ವ್ಯಾಜ್ಯ ಇತ್ಯರ್ಥವಾಗುವರೆಗೂ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ಆದರೂ ಕಾರ್ಯಾಚರಣೆ ಏಕೆ? ಅಧಿಕಾರಿಗಳಿಂದ ಜಾತಿ ನಿಂದನೆ ಏಕೆ? ಎಂದು ಪ್ರಶ್ನಿಸಿ ದೇವಸ್ಥಾನದ ಅಭಿವೃದ್ಧಿಗೆ ಉಗುರಗೋಳ, ಹರ್ಲಾಪುರ ಹಾಗೂ ಯಲ್ಲಮ್ಮ ತಾಂಡಾ ಗ್ರಾಮಗಳ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.
ಮೊದಲು 88 ಎಕರೆ ಭೂಮಿ ಸರ್ವೇ ಮಾಡಿಸಿ, ಅಲ್ಲಿಯವರೆಗೆ ತೆರವು ಸ್ಥಗಿತಗೊಳಿಸಬೇಕು. ಹದ್ದು ಬಸ್ತಿ ಬಳಿಕ ಗ್ರಾಪಂನಿಂದ ತೆರವು ಕಾರ್ಯಾಚರಣೆ ನಡೆಸಲಾಗುವುದು. ಹೀಗೆ ಮುಂದುವರಿದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪರ್ಯಾಯ ವ್ಯವಸ್ಥೆ ಕಲ್ಪಿಸಲು : ತೆರವು ಕಾರ್ಯಚರಣೆಯಿಂದ ವ್ಯಾಪಾರಸ್ಥರ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಜೀವನೋಪಾಯಕ್ಕಾಗಿ ಇವುಗಳನ್ನೇ ನಂಬಿಕೊಂಡಿದ್ದ ಕುಟುಂಬಗಳು ಹೋಗುವದಾದರೂ ಎಲ್ಲಿಗೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ವ್ಯಾಪಾರಸ್ಥರು ಒತ್ತಾಯಿಸಿದರು.
> ದೇವಸ್ಥಾನದ ಆದೇಶದಂತೆ ಭೂ ಬಾಡಿಗೆ ಪಾವತಿಸುತ್ತಾ ಬಂದಿದ್ದೇವೆ. ವ್ಯಾಪಾರ ನಂಬಿ ಅನೇಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅಧಿಕಾರಿಗಳು ಸಂತ ಸೇವಾಲಾಲ್ ಮಹಾರಾಜರ ನಾಮಲಕ ನಾಶಪಡಿಸಿ, ಜಾತಿನಿಂದನೆ ಮಾಡಿರುವುದು ಎಷ್ಟು ಸರಿ. ಚಂದ್ರಶೇಖರ ಹಳ್ಳದ ಬಂಜಾರ ಸಮುದಾಯದ ಮುಖಂಡ
ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರವಾಗಿದ್ದು ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಆದ್ಯ ನೀಡಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಕೋಟ್ಯಂತರ ಭಕ್ತರ ಮೂಲ ಸೌಕರ್ಯಕ್ಕೆ ಅನುಕೂಲ ಒದಗಿಸಲಾಗುತ್ತಿದೆ. ಅಭಿವೃದ್ಧಿ ಕುರಿತು ದೇವಸ್ಥಾನ ಬಂದ್ ಎಂಬ ಸುಳ್ಳು ಸುದ್ದಿ ನಂಬಬೇಡಿ. ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ.
> ಅಶೋಕ ದುಡಗುಂಟಿ ಕಾರ್ಯದರ್ಶಿ, ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರ.