ಜಿಲ್ಲೆ

ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಅನುದಾನ

ಎಂ.ಎಸ್​.ಹಿರೇಮಠ ಬೆಳಗಾವಿ

ಮೂಡಲಗಿ: ರಾಜ್ಯಸಭೆ ಸದಸ್ಯರ ಸ್ಥಳಿಯ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿಲ್ಲೆ ಹಾಗೂ ವಿಶೇಷವಾಗಿ ಮೂಡಲಗಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ಸಮೀಪದ ನಲ್ಲಾನಟ್ಟಿ, ಬಳೋಬಾಳ ಹಾಗೂ ಬೀರನಗಡ್ಡಿ ಗ್ರಾಮಗಳಲ್ಲಿ ಶನಿವಾರ ರಾಜ್ಯಸಭೆ ಸದಸ್ಯರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಸ್​ ತಂಗುದಾಣ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಅನುದಾನ ಸದ್ಬಳಕೆ ಮಾಡಿಕೊಳ್ಳುವಲ್ಲಿ ಸ್ಥಳಿಯ ಪುರಸಭೆ ನಿರಾಸಕ್ತಿ ತೋರಿದ್ದು, ಓಪನ್​ ಜಿಮ್​ ಮತ್ತು ಬಸ್​ ತಂಗುದಾಣಗಳಿಗೆ ಸ್ಥಳ ಒದಗಿಸುವಲ್ಲಿ ವಿಲರಾಗಿ ಪತ್ರ ಬರೆದಿದ್ದಾರೆ ಎಂದರು.

ಸಿದ್ರಾಮ ಕುಳ್ಳೂರ, ಸುನೀಲ ಈರೇಶನವರ, ಕಲ್ಲಪ್ಪ ಪಾಗಾದ, ವಿಠ್ಠಲ ಸುಣಧೋಳಿ, ಬಸವಣ್ಣಿ ತೆಳಗಡೆ, ದಶರಥ ಪಾಟೀಲ, ಬಸಪ್ಪ ಪಾಗಾದ, ಅಡಿವೆಪ್ಪ ಬಿಲಕುಂದಿ, ಅಲ್ಲಯ್ಯ ಪೂಜೇರಿ, ಸದಾ ಗುದಗಗೋಳ, ಲಗಮಣ್ಣ ಕುಳ್ಳೂರ, ಬಸವರಾಜ ಕೊಟಗಿ, ಮಾರುತಿ ಮೆಳವಂಕಿ, ಸತ್ತೆಪ್ಪ ಕಳಜಕನ್ನವರ, ಪ್ರಕಾಶ ಜಾಗನೂರ, ಲಗಮಣ್ಣ ಕಳಸಣ್ಣವರ, ಶಂಕರ ಮುದೆಪ್ಪಗೋಳ, ಗುರಸಿದ್ಧ ಪೊಟಿ, ಮುದಕಪ್ಪ ಈರೇಶನವರ, ಪ್ರಕಾಶ ಕರೆಪ್ಪಗೋಳ, ಮುದಕಪ್ಪ ಬೆಳವಿ, ಭೀಮಪ್ಪ ಕೌಜಲಗಿ, ಭೀಮಶೆಪ್ಪ ಕರೆಪ್ಪಗೋಳ, ಬಸವರಾಜ ಬೆಳವಿ, ಭೀಮಶೆಪ್ಪ ಚೆನ್ನಬಸಪ್ಪಗೋಳ, ದೇವಪ್ಪ ಕರಿಗಾರ, ಬಸವಣ್ಣಿ ಸಂಪಗಾಂವ, ಸಂಜೀವ ತಿಪ್ಪವ್ವಗೋಳ, ಬಸಲಿಂಗ ತೆಳಗಡೆ, ರಾಮಪ್ಪ ಬೆನವಾಡ, ಬಸಪ್ಪ ಮಾನಗಾಂವಿ, ರಮೇಶ ಸಂಪಗಾಂವಿ, ಪಿಡಿಒ ಗಣೇಶ ತೋಟಗಂಟಿ, ನಾರಾಯಣ ಸರ್ವಿ ಇತರರಿದ್ದರು.