ಸಾಗರದಲ್ಲಿ ತಾಲೂಕು ಹರಳಯ್ಯ ಯುವಜನ ಸಮಾಜದಿಂದ ರಾಷ್ಟçಮಟ್ಟದ ವಾಲಿಬಾಲ್ ಪಂದ್ಯಕ್ಕೆ ಆಯ್ಕೆಯಾಗಿರುವ ಕ್ರೀಡಾಪಟು ವಿ.ನಿಖಿಲ್ ಅವರನ್ನು ಸನ್ಮಾನಿಸಲಾಯಿತು. ಮಹೇಶ್, ಈಶ್ವರ್ ಚಂದ್ರಶೇಖರ್, ಪೂರ್ಣಿಮಾ, ಜಗನ್ನಾಥ್, ನಿಖಿಲ್, ಇತರರಿದ್ದರು. 
ಜಿಲ್ಲೆ

ನಿಖಿಲ್ ತಂಡಕ್ಕೆ ಆಲ್ ದಿ ಬೆಸ್ಟ್

Shivamogga - Desk - Megha MS

ಸಾಗರ: ಹರಳಯ್ಯ ಯುವಜನ ಸಮುದಾಯದ ಬಾಲಕ ವಿ.ನಿಖಿಲ್ ತಂಡ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುವುದು ಸಮಾಜದ ಹೆಮ್ಮೆಯಾಗಿದೆ ಎಂದು ತಾಲೂಕು ಹರಳಯ್ಯ ಯುವಜನ ಸಮಾಜದ ಅಧ್ಯಕ್ಷ ಎಂ.ಡಿ. ಆನಂದ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿ.ನಿಖಿಲ್ ಅವರನ್ನು ಸನ್ಮಾನಿಸಿ ಮಾತನಾಡಿ, ಪ್ರಗತಿ ಶಾಲೆಯಲ್ಲಿ ಹತ್ತನೇ ತರಗತಿಯ ನಿಖಿಲ್ ನಾಯಕತ್ವದ ತಂಡ ವಾಲಿಬಾಲ್ ಪಂದ್ಯದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ರಾಷ್ಟçಮಟ್ಟದ ವಾಲಿಬಾಲ್ ಪಂದ್ಯಕ್ಕೆ ಆಯ್ಕೆಯಾಗಿದೆ ಎಂದರು.
ತಂಡದ ತರಬೇತುದಾರ ಮಹೇಶ್ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ತಂಡ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದೆ. ನಿಖಿಲ್ ಕಳೆದ ನಾಲ್ಕು ವರ್ಷಗಳಿಂದ ವಾಲಿಬಾಲ್ ತರಬೇತಿ ಪಡೆಯುತ್ತಿದ್ದು ಅತ್ಯಂತ ಪರಿಶ್ರಮದಿಂದ ಗುರಿ ತಲುಪಲು ಪ್ರಯತ್ನಿಸುತ್ತಿದ್ದಾರೆ. ರಾಷ್ಟçಮಟ್ಟದಲ್ಲಿ ಸಹ ತಂಡವನ್ನು ಗೆಲ್ಲಿಸಿ ತರುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಈಶ್ವರ್ ಚಂದ್ರಶೇಖರ್, ಪೂರ್ಣಿಮಾ, ಜಗನ್ನಾಥ್, ನಿಖಿಲ್, ವೆಂಕಟೇಶ್, ಜಗನ್ನಾಥ್ ಡಿ. ಪಾವಾಸ್ಕರ್, ಗಣೇಶ್, ಶಿವರಾಜ್, ಲೋಕೇಶ್, ಗಿರೀಶ್ ಹಾಜರಿದ್ದರು.