ಜಿಲ್ಲೆ

ಜ್ಞಾನದಿಂದ ಸರ್ವಾಂಗೀಣ ಪ್ರಗತಿ

ಸೋಮನಾಥ ರೆಡ್ಡಿ

ನವಲಗುಂದ: ಜ್ಞಾನವೇ ಸರ್ವಕೂ ಸಮೃದ್ಧ ಶಕ್ತಿ, ಅಂತಹ ಶಕ್ತಿಯನ್ನು ಶ್ರದ್ಧೆಯಿಂದ ನಿಮ್ಮದಾಗಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಪಟ್ಟಣದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ವಿದ್ಯಾಪೀಠದ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಶ್ರೀ ವೀರೇಂದ್ರ ಶ್ರೀಗಳು ಶಿಲ್ಪಿ ಶಿಲೆಯನ್ನು ಕೆತ್ತಿ ಮೂರ್ತಿ ಮಾಡಿದರೆ ಶಿಕ್ಷಕ ವಿದ್ಯಾರ್ಥಿಗಳನ್ನು ಸಶಕ್ತ ಹಾಗೂ ಸದೃಢ ನಾಯಕ ನಾಗರಿಕರನ್ನಾಗಿ ಮಾಡುವ ಶಿಲ್ಪಿ ಎಂದರು.

ಎಂ.ಎನ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಹು-ಧಾ ಮಹಾನಗರ ಪಾಲಿಕೆಯ ಮಹಾಪೌರ ರಾಮಣ್ಣ ಬಡಿಗೇರ, ಎಂ.ಎನ್. ಬಡಿಗೇರ, ಎಸ್.ಬಿ. ದಾನಪ್ಪಗೌಡ್ರ, ಕೆ.ಡಿ. ಬಡಿಗೇರ, ಸಿದ್ದಯ್ಯ ಸ್ವಾಮೀಜಿ ಇದ್ದರು.

ಉತ್ತಮ ಸಾಧನೆಗೈದ ಕುಮಾರಿ ವೈಷ್ಣವಿ ಬಡಿಗೇರ, ಭವಾನಿ ಕಟಗಿ, ಸುಮಾ ಹೂಗಾರ ಅವರನ್ನು ನ್ನು ಸನ್ಮಾನಿಸಲಾಯಿತು.