ವಿಜಯಪುರ : ಕ್ರೀಡಾಕೂಟಗಳು ಶಿಸ್ತು, ಸ್ವಯಂ ನಿಯಂತ್ರಣ, ಸಮಯದ ನಿರ್ವಹಣೆ ಮತ್ತು ನಿಯಮಗಳ ಪಾಲನೆಯಂತಹ ಗುಣಗಳನ್ನು ಕಲಿಸುತ್ತವೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಹೇಳಿದರು. ನಗರ ಹೊರ ವಲಯದ ಬರಟಗಿ ರಸ್ತೆಯ ಎಸ್. ಕುಮಾರ್ಸ್ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜುಗಳ ಖೋ&ಖೋ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸದಾಶಿವ ವಾಲಿಕಾರ ಮಾತನಾಡಿ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತವೆ.
ಶಿಸ್ತು, ನಾಯಕತ್ವ ಮತ್ತು ಸಮಯ ನಿರ್ವಹಣೆಯಂತಹ ಜೀವನ ಕೌಶಲ ಬೆಳೆಸುವುದರ ಜತೆಗೆ ಒತ್ತಡ ನಿವಾರಿಸುತ್ತವೆ ಎಂದರು. ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಪ್ರೌಢ ಶಾಲೆಯ ಮುಖ್ಯ ಗುರು ಪ್ರಶಾಂತ ಹಿರೇಮಠ, ಕೆ.ಎ. ಉಪ್ಪಾರ, ಬಿ.ಎಲ್. ನಾಟಿಕಾರ, ಗಣೇಶ ಗುನ್ನಾಪುರ ಉಪಸ್ಥಿತಿ ವಹಿಸಿದ್ದರು.
ವಿಜಯಪುರದ ಎಸ್. ಕುಮಾರ್ಸ್ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜುಗಳ ಖೋ&ಖೋ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಡಾ. ಸಿ.ಕೆ. ಹೊಸಮನಿ, ಸದಾಶಿವ ವಾಲಿಕಾರ, ಪ್ರಶಾಂತ ಹಿರೇಮಠ ಮತ್ತಿತರರಿದ್ದಾರೆ.