ಜಿಲ್ಲೆ

ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ಮುಖ್ಯ

ಎಂ.ಎಸ್​.ಹಿರೇಮಠ ಬೆಳಗಾವಿ

ಗೋಕಾಕ: ತಾಲೂಕಿನ ದಿ.ಗೋಕಾಕ ಅರ್ಬನ್​ ಕೋ&ಆಪ್​ ಕ್ರೆಡಿಟ್​ ಬ್ಯಾಂಕ್​ 216 ಕೋಟಿ ರೂ. ವ್ಯವಹಾರ ನಡೆಸಿ 1,59 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್​ ಚೇರ್ಮನ್​ ಬಸವರಾಜ ಕಲ್ಯಾಣಶೆಟ್ಟಿ ತಿಳಿಸಿದರು. ಇಲ್ಲಿನ ಮಹಾಲಕ್ಷಿ$್ಮ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 119ನೇ ವಾರ್ಷಿಕ ಮಹಾಸಭೆಯ ಅಧ್ಯತೆ ವಹಿಸಿ ಮಾತನಾಡಿ, ಬ್ಯಾಂಕ್​ನ ಸವೋರ್ತೋಮುಖ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಬಹುಮುಖ್ಯವಾಗಿದೆ ಎಂದರು. ಅಶೋಕ ಹೆಗ್ಗಣ್ಣವರ ವಾರ್ಷಿಕ ವರದಿ ಮಂಡಿಸಿದರು. ಬ್ಯಾಂಕ್​ ಉಪಾಧ್ಯ ಸುಧೀರ ಅಂಕಲಿ, ದಿಗ್ದರ್ಶಕರಾದ ಜಯಾನಂದ ಮುನವಳ್ಳಿ, ವೀರಣ್ಣ ಬಿದರಿ, ದುಂಡಪ್ಪ ಬಿದರಿ, ಮಹಾಂತೇಶ ಕಲ್ಲೋಳಿ, ರಾಜು ತಾರಳಿ, ಶೋಭಾ ಕುರಬೇಟ, ಶಾಂತಕ್ಕ ೂಡಗೇರಿ, ಚಂದ್ರಕಾಂತ ಕುರಬೇಟ, ಪಿ.ಎಂ.ಮಡ್ಡೆಪ್ಪಗೋಳ, ಪಿ.ಎಸ್​.ಸೊಲ್ಲಾಪುರಮಠ, ಎಸ್​.ಪಿ.ಪಟ್ಟಣಶೆಟ್ಟಿ, ಸಿ.ಸಿ.ಕಡೇವಾಡಿ, ಎಸ್​.ಬಿ.ಮಗದುಮ್ಮ, ಬಿ.ಬಿ.ಮಾಳಿ ಇತರರಿದ್ದರು. ಪ್ರಧಾನ ವ್ಯವಸ್ಥಾಪಕ ಎಸ್​.ಎಸ್​.ಪಾಟೀಲ ನಿರೂಪಿಸಿದರು. ದಿಗ್ದರ್ಶಕ ಮಲ್ಲಿಕಾರ್ಜುನ ಚುನಮರಿ ವಂದಿಸಿದರು.