ರಾಯಚೂರು: ಜಿಲ್ಲೆಯಾದ್ಯಂತ ವಿವಿಧ 42 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರದಿಂದ ಮಾ.22ರವರೆಗೆ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಯಚೂರು ತಾಲೂಕಿನ 13, ಸಿಂಧನೂರು ತಾಲೂಕಿನ 9, ಲಿಂಗಸುಗೂರು ತಾಲೂಕಿನ 8, ಮಾನ್ವಿ ಮತ್ತು ದೇವದುರ್ಗ ತಾಲೂಕಿನಲ್ಲಿ ತಲಾ ನಾಲ್ಕು, ಮಸ್ಕಿ ಮತ್ತು ಸಿರವಾರ ತಾಲೂಕಿನ ತಲಾ ಎರಡು ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಗಳು ಸುಗಮವಾಗಿ ನಡೆಯಲು ತಲಾ 42 ಮುಖ್ಯ ಅೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಉತ್ತರ ಪತ್ರಿಕೆ ಪಾಲಕರು ಸೇರಿದಂತೆ 30 ವಿದ್ಯಾರ್ಥಿಗಳಿಗೆ ಒಬ್ಬರಂತೆ ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಜತೆಗೆ ವಿವಿಧ ಇಲಾಖೆ ಅಕಾರಿಗಳನ್ನು ಒಳಗೊಂಡ ಜಾಗೃತ ದಳವನ್ನು ರಚನೆ ಮಾಡಲಾಗಿದೆ.
43 ಸರ್ಕಾರಿ, 8 ಅನುದಾನಿತ, 144 ಅನುದಾನ ರಹಿತ, 9 ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ಒಟ್ಟು 185 ಪಿಯು ಕಾಲೇಜುಗಳ 19,167 ವಿದ್ಯಾರ್ಥಿಗಳು, ಪುನಾವರ್ತಿತ 2,217, 916 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 22,300 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.
ರಾಯಚೂರು ತಾಲೂಕಿನಲ್ಲಿ 5,241, ಸಿಂಧನೂರು ತಾಲೂಕಿನಲ್ಲಿ 4,315, ಸಿರವಾರ ತಾಲೂಕಿನಲ್ಲಿ 770, ಮಸ್ಕಿ ತಾಲೂಕಿನಲ್ಲಿ 825, ಮಾನ್ವಿ ತಾಲೂಕಿನಲ್ಲಿ 1,729, ಲಿಂಗಸುಗೂರು ತಾಲೂಕಿನಲ್ಲಿ 4,337, ದೇವದುರ್ಗ ತಾಲೂಕಿನಲ್ಲಿ 1,950 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಈ ಬಾರಿ ಪರೀಕ್ಷಾ ಪದ್ಧತಿಯನ್ನು ಬದಲಾವಣೆ ಮಾಡಲಾಗಿದ್ದು, ಪರೀಕ್ಷೆ 1, 2 ಮತ್ತು 3ಹೆಸರಿನಲ್ಲಿ ತಿಂಗಳಿಗೊಂದರಂತೆ ಪರೀಕ್ಷೆ ನಡೆಸಲಾಗುತ್ತಿದ್ದು, ಈಗ ನಡೆಯುತ್ತಿರುವ ಪರೀಕ್ಷೆ-1ಕ್ಕೆ ನೋಂದಣಿ ಮಾಡಿಸಿಕೊಂಡವರು ಪರೀಕ್ಷೆ 2 ಮತ್ತು 3ಕ್ಕೂ ಬರೆಯುವ ಅವಕಾಶ ನೀಡಲಾಗುತ್ತಿದೆ.
ಹಿಂದೆ ವಿಜ್ಞಾನ ವಿಭಾಗ ವಿದ್ಯಾರ್ಥಿಗಳಿಗೆ ಮಾತ್ರ ಆಂತರಿಕ ಅಂಕಗಳನ್ನು ನೀಡಲಾಗುತ್ತಿತ್ತು. ಈ ಬಾರಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೂ 20 ಆಂತರಿಕ ಅಂಕಗಳನ್ನು ನಿಗದಿ ಪಡಿಸಲಾಗಿದ್ದು, ಕಳೆದ ಬಾರಿ ಲಿತಾಂಶ ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು ಮೇಲೆ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗಿದೆ.
ದ್ವಿತೀಯ ಪಿಯು ಪರೀಕ್ಷೆಗಳನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ಬಾರಿ ಲಿತಾಂಶ ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು ಕನಿಷ್ಠ 15ನೇ ಸ್ಥಾನಕ್ಕಾದರೂ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.