ತಾವರಗೇರಾ ಸಮೀಪದ ಮುದ್ದಲಗುಂದಿ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಅಮರೇಗೌಡ ಪಾಟೀಲ್, ಪ್ರಮುಖರಾದ ಕೆ.ಶರಣಪ್ಪ, ಹೇಮವೇಮ ಸ್ವಾಮೀಜಿ ಇದ್ದರು. 
ಜಿಲ್ಲೆ

ಸರ್ವ ಸಮುದಾಯದಿಂದಲೂ ಪೂಜೆ

Kopala - Desk - Eraveni

ತಾವರಗೇರಾ: ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಸಮೀಪದ ಮುದ್ದಲಗುಂದಿ ಗ್ರಾಮದಲ್ಲಿ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಒಂದು ಸಮುದಾಯದ ಆರಾಧ್ಯ ದೈವವಾಗಿರದೇ ಎಲ್ಲ ಸಮುದಾಯದವರು ಪೂಜಿಸುತ್ತಾರೆ. ದೇವರನ್ನು ಒಲಿಸಿಕೊಂಡ ಸಾಧ್ವಿಯಾಗಿದ್ದರು ಎಂದರು.

ರಡ್ಡಿ ಸಮಾಜದ ಅಧ್ಯಕ್ಷ ಶೇಖರಗೌಡ ಪಾಟೀಲ್ ಗುಮಗೇರಿ, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಮಾಜಿ ಶಾಸಕ ಕೆ.ಶರಣಪ್ಪ, ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಕುಷ್ಟಗಿ ತಾಲೂಕು ಗೌರವಾಧ್ಯಕ್ಷ ಶಿವಸಂಗನಗೌಡ ಶಿವನಗುತ್ತಿ, ತಾಲೂಕು ಅಧ್ಯಕ್ಷ ದೊಡ್ಡನಗೌಡ ಪಾಟೀಲ ಗುಮಗೇರಿ, ಹೇಮ ವೇಮ ವಿದ್ಯಾಪೀಠದ ವೇಮಾನಂದ ಮಹಾಸ್ವಾಮಿ, ಅಂಕಲಿಮಠದ ಬ್ರಹ್ಮ ವೀರಭದ್ರ ಮಹಾಸ್ವಾಮೀಜಿ, ಮದ್ದಾನಿ ಹಿರೇಮಠ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಪ್ರಮುಖರಾದ ಸಿ.ವಿ.ಚಂದ್ರಶೇಖರ, ಪುರುಷೋತ್ತಮ ರಡ್ಡಿ ಕನಕಗಿರಿ ಇತರರಿದ್ದರು.