ಸರ್ಕಾರಿ ನೌಕರರ ಭವನದಲ್ಲಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹಿಂದಿ ದಿವಸ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿದರು. ಬಸವರಾಜಪ್ಪ, ಸಿದ್ದಬಸಪ್ಪ, ಧರ್ಮಪ್ಪ, ನಾರಾಯಣ ದೊಡ್ಡಮನಿ, ಬಿ.ನಾಗರಾಜ್, ಶ್ರೀಕಾಂತ ಇದ್ದರು. 
ಜಿಲ್ಲೆ

ಎಲ್ಲ ಭಾಷೆ ಕಲಿಯುವುದು ಅವಶ್ಯ

Shivamogga - Desk - Praveena Kumar S

ಶಿವಮೊಗ್ಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಭಾಷೆಗಳನ್ನು ಕಲಿಯುವುದು ಅತ್ಯಂತ ಅವಶ್ಯಕವಾಗಿದ್ದು ಹೊರ ಜಗತ್ತಿಗೆ ಮಕ್ಕಳು ತೆರೆದುಕೊಂಡಾಗ ಭಾಷೆಯು ಅವರಿಗೆ ತೊಡಕಾಗಬಾರದು ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹೇಳಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಹಿಂದಿ ಭಾಷಾ ಶಿಕ್ಷಕರ ಸಂಘದ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ಹಿಂದಿ ದಿವಸ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ಶಿಕ್ಷಕರು ತರಗತಿಗಳಲ್ಲಿ ಹಿಂದಿಯಲ್ಲಿಯೇ ಮಾತನಾಡುವುದರ ಮೂಲಕ ಮಕ್ಕಳಿಗೆ ಹಿಂದಿ ವಿಷಯದ ಬಗ್ಗೆ ಮೋಹವುಂಟು ಮಾಡಬೇಕು. ಕಲಿಯಲು ಪ್ರೇರೇಪಣೆ ನೀಡಬೇಕು ಎಂದರು. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿಂದಿ ವಿಷಯದ ಫಲಿತಾಂಶ ಅತ್ಯುತ್ತಮವಾಗಿದ್ದು ಮುಂದೆಯೂ ಶೇಕಡ ನೂರರಷ್ಟು ಫಲಿತಾಂಶ ತರಲು ಶಿಕ್ಷಕರು ಶ್ರಮ ಹಾಕಬೇಕು ಎಂದು ಸಲಹೆ ನೀಡಿದರು. ತುಮಕೂರಿನ ಸರ್ವೋದಯ ಪ್ರೌಢಶಾಲೆ ಶಿಕ್ಷಕ ಶ್ರೀಕಾಂತ ಅವರು ಉಪನ್ಯಾಸ ನೀಡಿದರು. ಡಯಟ್ ಪ್ರಾಚಾರ್ಯ ಬಸವರಾಜಪ್ಪ, ಕರ್ನಾಟಕ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಜಿಲ್ಲಾಧ್ಯಕ್ಷ ಧರ್ಮಪ್ಪ, ಹಿಂದಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ದೊಡ್ಡಮನಿ, ಕಾರ್ಯದರ್ಶಿ ಬಿ.ನಾಗರಾಜ್ ಇದ್ದರು.