ಯಳಂದೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರವೇ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಅವರ ಹುಟ್ಟುಹಬ್ಬದ ನಿಮಿತ್ತ ತಾಲೂಕು ಘಟಕದ ವತಿಯಿಂದ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ಶುಕ್ರವಾರ ವಿತರಣೆ ಮಾಡಲಾಯಿತು. 
ಜಿಲ್ಲೆ

ಕನ್ನಡ ಪರ ಹೋರಾಟಗಳಿಗೆ ಎಲ್ಲರೂ ಕೈ ಜೋಡಿಸಿ

ಎಂ.ರವಿ

ಯಳಂದೂರು: ಕನ್ನಡ ಪರ ಹೋರಾಟಗಾರರು ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸುವ ಪಾಲಕರಾಗಿದ್ದಾರೆ. ಇಂತಹವರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಕೂಡ ಒಬ್ಬರಾಗಿದ್ದಾರೆ. ಇಂತಹ ಎಲ್ಲ ಹೋರಾಟಗಾರರನ್ನು ಬೆಂಬಲಿಸಲು ಎಲ್ಲಾ ಕನ್ನಡ ಮನಸ್ಸುಗಳು ಕೈ ಜೋಡಿಸಬೇಕು ಎಂದು ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ. ಮೋಳೆ ನಾಗರಾಜು ಕರೆ ನೀಡಿದರು.

ಅವರು ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಎಸ್‌ಬಿಐ ವೃತ್ತ ಸೇರಿದಂತೆ ಹಲವೆಡೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ಕುಮರ್ ಶೆಟ್ಟಿ ಹುಟ್ಟುಹಬ್ಬದಂದು ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾತನಾಡಿದರು.

ನಮ್ಮ ನಾಡಿನ ಪರಂಪರೆಗೆ ಸಾವಿರಾರು ವರ್ಷಗಳ ಐತಿಹ್ಯವಿದೆ. ನಮ್ಮ ನುಡಿಗೆ ಅನ್ಯ ಭಾಷಿಕರಿಂದ ದಿನೇ ದಿನೆ ಅಪಾಯ ಹೆಚ್ಚುತ್ತಿದೆ. ಇಲ್ಲಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡ ಕಲಿಯಬೇಕು, ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡ ಭಾಷೆಯನ್ನೇ ಬಳಸಬೇಕು. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪ್ರವೀಣ್‌ಕುಮಾರ್‌ಶೆಟ್ಟಿ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಒಂದೊಂದು ಹೋರಾಟದಲ್ಲಿ ಭಾಗವಹಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ. ಈ ವರ್ಷ ಕಳಸ-ಬಂಡೂರಿ ಯೋಜನೆಯ ಅನುಷ್ಠಾನದ ಹೋರಾಟದಲ್ಲಿ ಅವರು ಭಾಗವಹಿಸಿದ್ದಾರೆ. ಇವರ ಹುಟ್ಟುಹಬ್ಬದಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಗೌಡಹಳ್ಳಿ ರವಿ, ವೆಂಕಟೇಶ್, ಸ್ವಾಮಿ, ವಿಜಯ್, ನಾಗರಾಜು, ಪುಟ್ಟರಾಜು, ಕಿಶೋರ್, ಹರೀಶ್, ಅಮ್ಜದ್, ಕುಮಾರ್, ಮಹದೇವ್‌ಸಿಂಗ್, ಅಂಬಳೆ ಕುಮಾರ್ ವೈದ್ಯಾಧಿಕಾರಿ ಡಾ.ಶ್ರೀಧರ್, ಡಾ. ನಾಗೇಂದ್ರಮೂರ್ತಿ, ಡಾ.ನಾಗೇಶ್, ಡಾ.ಶಶಿರೇಖಾ ಸೇರಿದಂತೆ ಅನೇಕರು ಇದ್ದರು.