ಮೈಸೂರು: ನಗರದ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಂಚೆ ಇಲಾಖೆ ನ.10ರಿಂದ 14ರವರೆಗೆ 38ನೇ ಅಖಿಲ ಭಾರತ ಅಂಚೆ ಬ್ಯಾಡ್ಮಿಂಟನ್ ಪಂದ್ಯಾವಳಿ ಹಮ್ಮಿಕೊಂಡಿದೆ ಎಂದು ಮೈಸೂರು ವಲಯದ ಪೋಸ್ಟ್ ವಾಸ್ಟರ್ ಜನರಲ್ ಎಲ್.ಕೆ.ದಾಸ್ ಹೇಳಿದರು.
ಸಂಸದ ಂುದುವೀರ್ ಕೃಷ್ಣದತ್ತ ಚಾಮರಾಜ ಒಡೆಂುರ್ ನ.10 ರಂದು ಬೆಳಗ್ಗೆ 10ಕ್ಕೆ ಪಂದ್ಯಾವಳಿಗೆ ಚಾಲನೆ ನೀಡುವರು.ಧ್ಯಾನ್‌ಚಂದ್ ಪ್ರಶಸ್ತಿ ವಿಜೇತರಾದ ಅಂತಾರಾಷ್ಟ್ರೀಂು ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರುಗುಂಡೆ, ಕರ್ನಾಟಕ ವೃತ್ತದ ಪೋಸ್ಟ್ ವಾಸ್ಟರ್ ಜನರಲ್ ಎಸ್.ರಾಜೇಂದ್ರ ಕುವಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನ.14ರಂದು ಮಧ್ಯಾಹ್ನ 2ಕ್ಕೆ ಸವಾರೋಪ ಸವಾರಂಭ ಹಮ್ಮಿಕೊಳ್ಳಲಾಗಿದೆ. ಅಂಚೆ ಸೇವೆಗಳ ಮಂಡಳಿಂು ಸದಸ್ಯ ಆಶೀಶ್ ಕುವಾರ್, ಒಲಂಪಿಂುನ್ ಅಶ್ವಿನಿ ಅಕ್ಕಂಜಿ ಚಿದಾನಂದ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
20 ಅಂಚೆ ವಲಂುಗಳ 134 ಪುರುಷರು, 60 ಮಹಿಳಾ ಅಧಿಕಾರಿಗಳೂ ಸೇರಿದಂತೆ ಒಟ್ಟು 194 ಆಟಗಾರರು ಸಿಂಗಲ್ಸ್, ಡಬಲ್ಸ್, ವೆಟರನ್ಸ್ (45 ವರ್ಷ ಮೇಲ್ಪಟ್ಟವರು), ಮಿಶ್ರ ಡಬಲ್ಸ್ ಮತ್ತು ಅನುಭವಿಗಳ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ವಿಜೇತರಿಗೆ ಟ್ರೋಫಿ ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉತ್ತರ ಕರ್ನಾಟಕ ವಲಂುದ ಪೋಸ್ಟ್ ವಾಸ್ಟರ್ ಜನರಲ್ ಸುಶೀಲ್ ಕುವಾರ್, ದಕ್ಷಿಣ ಕರ್ನಾಟಕ ವಲಂುದ ಪೋಸ್ಟ್ ವಾಸ್ಟರ್ ಜನರಲ್ ಚಂದ್ರಶೇಖರ್ , ನಿರ್ದೇಶಕ ಸಂದೇಶ್ ಮಹದೇವಪ್ಪ ಹಾಗೂ ಇತರರು ಇದ್ದರು.