ಜಿಲ್ಲೆ

ಆರ್ಥಿಕ ಬಲ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಕ್ರಮ : ಲತಾ ಹರೀಶ್ ಹೇಳಿಕೆ

ಹಳೆಯಂಗಡಿ: ಮಹಿಳೆಯರನ್ನು ಸ್ವಾವಲಂಬಿ ಹಾಗೂ ಸದೃಢರಾಗಿಸಿ ಕೌಟುಂಬಿಕ ಆರ್ಥಿಕ ಬಲ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು ಎಂದು ಆಲ್ ಇಂಡಿಯಾ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೇಷನ್ ಸಂಸ್ಥೆ ಮಂಗಳೂರು ವಲಯದ ಅಧ್ಯಕ್ಷೆ ಲತಾ ಹರೀಶ್ ಹೇಳಿದರು.

ಮಂಗಳೂರಿನಲ್ಲಿ ಇತ್ತೀಚೆಗೆ ಅಸೋಸಿಯೇಷನ್‌ನ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭ ಮಾತನಾಡಿದರು.

ಬ್ಯೂಟಿಶೀಯನ್‌ಗಳ ಶ್ರೇಯೋಭಿವೃದ್ಧಿಗೆ ಹುಟ್ಟಿಕೊಂಡ ಆಲ್ ಇಂಡಿಯಾ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೇಷನ್ ಸಂಸ್ಥೆಯು ಮಂಗಳೂರು ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯು ಸದಸ್ಯರ ಆಶಾಕಿರಣವಾಗಿ ಕೆಲಸ ಮಾಡಲಿದೆ ಎಂದರು.

ಮಹಾಸಭೆಯ ಕಾರ್ಯಕಲಾಪವನ್ನು ಸಲಹಾ ಸಮಿತಿ ಸದಸ್ಯರಾದ ಮರ್ಸಿ ವೀಣಾ ಡಿಸೋಜ, ಸೋನಿಯಾ ಡಿಲಿಮ, ಜಗದೀಶ್ ನಡೆಸಿಕೊಟ್ಟರು. ಕಾರ್ಯದರ್ಶಿಯಾಗಿ ಭವಾನಿ ರೈ, ಖಜಾಂಚಿಯಾಗಿ ರಜನಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸ್ನೇಹ, ಪದ್ಮ, ಮೀನಾ, ಸಂಗೀತ, ಶಾರದಾ, ರೂಪ, ಸಹನಾ, ಶಾಂತ, ಶ್ವೇತ ಆಯ್ಕೆಯಾಗಿದ್ದಾರೆ.