ಜಿಲ್ಲೆ

ಮಳೆಗಾಲ ಎದುರಿಸಲು ಎಲ್ಲ ಇಲಾಖೆಗಳು ಒಟ್ಟಾಗಿ ಕೆಲಸ

ಕುಂದಾಪುರ: ಮಳೆಗಾಲ ಎದುರಿಸಲು ಎಲ್ಲ ಇಲಾಖೆಗಳು ಒಟ್ಟಾಗಿ ಕೆಲಸ ನಿರ್ವಹಿಸಬೇಕು. ತಮ್ಮ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಮುಂಜಾಗೃತಾ ಕ್ರಮ ಕೈಗೊಂಡು ಜನರಿಗೆ ತೊಂದರೆ ಆಗದಂತೆ, ಯಾವುದೇ ಪ್ರಾಣ, ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಕುಂದಾಪುರ ತಾಲೂಕು ಪ್ರಜಾ ಸೌಧದ ಕಚೇರಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು ತಾಲೂಕು ಹಾಗೂ ಕುಂದಾಪುರ ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಹಾನಿ ಹಾಗೂ ಮಳೆಗಾಲದ ಮುಂಜಾಗೃತಾ ಕ್ರಮಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ವಾತನಾಡಿದರು.

ಉಭಯ ತಾಲೂಕುಗಳ ತಹಸೀಲ್ದಾರ್‌ಗಳು ಎಲ್ಲ ಇಲಾಖೆಗಳಿಂದ ವಾಹಿತಿ ಪಡೆದು ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಕೆಲಸ ವಾಡಬೇಕಿದೆ. ಹಿಂದಿನ ಸಾಲಿನ ಟನೆಗಳ ಆಧಾರದಲ್ಲಿ ಅಪಾಯ ಮತ್ತು ಅನಾಹುತಗಳನ್ನು ಗಮನಿಸಿ ಪರಿಹಾರೋಪಾಯಗಳನ್ನು ವಾಡಬೇಕು. ಗಾಳಿ ಮಳೆಯಿಂದ ಆಗುವ ಹಾನಿಗಳಿಗೆ ತುರ್ತು ಸ್ಪಂದಿಸಿ ಅಗತ್ಯ ಪರಿಹಾರ ನೀಡಲು ವ್ಯವಸ್ಥೆ ವಾಡಬೇಕು ಎಂದು ಹೇಳಿದರು.

ಮಳೆಗಾಲ ಆರಂಭಕ್ಕೂ ಮೊದಲೇ ಆಗುತ್ತಿರುವ ವಿದ್ಯುತ್ ಕಡಿತದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.

ಜೆಜೆಎಂ ಕಾಮಗಾರಿ, ಪೈಪ್‌ಲೈನ್‌ಗಾಗಿ ಹೊಂಡ ತೆಗೆದ ಜಾಗ ಮುಚ್ಚಬೇಕು, ನಿರ್ವಾಣ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳ ಸುರಕ್ಷತೆ ಬಗ್ಗೆ ಗಮನ ಇಡುವಂತೆ ಇಲಾಖೆಗೆ ಸೂಚಿದರು.

ಗ್ರಾಪಂ ಮನವಿಗಳಿಗೆ ತುರ್ತು ಸ್ಪಂದಿಸಬೇಕು. ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಮರಗಳು ಬಿದ್ದಲ್ಲಿ ತಕ್ಷಣ ಸ್ಪಂದಿಸುವಂತೆ ಸೂಚಿಸಿದರು. ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆಗಳನ್ನು ಗುರುತಿಸಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ವಾಹಿತಿಯನ್ನು ಆಯಾ ಶಾಲಾ ಮುಖ್ಯ ಶಿಕ್ಷಕರಿಂದ ಪಡೆದು ಈ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದರು.

ಮಳೆ ಮತ್ತು ಕಡಲು ಪ್ರಕ್ಷುಬ್ಧ ಆಗುವ ಅವಧಿಗಳಲ್ಲಿ ಮೀನುಗಾರರಿಗೆ ಸರಿಯಾದ ವಾಹಿತಿ ನೀಡಬೇಕು ಎಂದು ಹೇಳಿದರು. ಜೂ.1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಇದ್ದು, ಮೀನುಗಾರರಿಗೆ ಕಾಲ ಕಾಲಕ್ಕೆ ಅಗತ್ಯ ವಾಹಿತಿ ನೀಡಲಾಗುವುದು ಎಂದು ಉಪನಿರ್ದೇಶಕಿ ಸುಮಲತಾ ಹೇಳಿದರು.

ತ್ರಾಸಿಮರವಂತೆ ಕಡಲ ತೀರದಲ್ಲಿ ಹೆಚ್ಚಿನ ಗಹರಕ್ಷಕ ದಳದ ಸಿಬ್ಬಂದಿ ನಿಯೋಜಿಸುವಂತೆ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಬಸವರಾಜ್ ಕನಶೆಟ್ಟಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆಗಳಲ್ಲಿ ಅಲ್ಲಲ್ಲಿ ತೇಪೆ ಎದ್ದು ಹೋಗಿ ಹೊಂಡ ಬಿದ್ದಿರುವಲ್ಲಿ ಅಪಘಾತ ನಡೆಯುತ್ತಿದ್ದು, ಈ ಬಗ್ಗೆ ತುರ್ತು ಗಮನ ಹರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇವಾನಂದ ಹೇಳಿದರು. ಕುಂದಾಪುರ ತಹಸೀಲ್ದಾರ ಪ್ರದೀಪ್ ಕುರ್ಡೇಕರ್, ಬೈಂದೂರು ತಹಸೀಲ್ದಾರ ಭೀಮ್ ಸೇನ್ ಕುಲಕರ್ಣಿ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.