ಜಿಲ್ಲೆ

ಶ್ವಾನಗಳ ಪ್ರದರ್ಶನ 12ರಂದು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಹುಬ್ಬಳ್ಳಿ ಕೆನಲ್ ಅಸೋಸಿಯೇಷನ್ ಅ. 12ರಂದು ಗೋಕುಲ ರಸ್ತೆ ವಿಮಾನ ನಿಲ್ದಾಣದ ಎದುರಿನ ಮಿಸ್ಕಿನ್ ಲಾನ್ಸ್​ನಲ್ಲಿ 2ನೇ ಎಲ್ಲ ತಳಿಗಳ ಶ್ವಾನಗಳ ಮುಕ್ತ ಪ್ರದರ್ಶನ ಏರ್ಪಡಿಸಿದೆ.

ಬೆಳಗ್ಗೆ 9.30ರಿಂದ ಸಂಜೆಯ 7 ಗಂಟೆಯವರೆಗೆ ನಡೆಯಲಿದೆ. ಕರ್ನಾಟಕ ಮಾತ್ರವಲ್ಲದೇ ನೆರೆ ರಾಜ್ಯಗಳ ಶ್ವಾನ ಪ್ರಿಯರು, ಪ್ರದರ್ಶಕರು, ತಳಿಗಾರರು ಪಾಲ್ಗೊಳ್ಳುವರು. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ದೊಂದಿಗೆ ನೋಂದಾಯಿತ ಶ್ವಾನಗಳಿಗೆ ಮತ್ತು ನೋಂದಾಯಿಸಲ್ಪಡದ ಶ್ವಾನಗಳಿಗೆ ಪ್ರತ್ಯೇಕ ಸ್ಪರ್ಧೆಗಳಿವೆ. ಶರತ ಶರ್ಮಾ ಹಾಗೂ ಯಶೋಧರಾ ನಿರ್ಣಾಯಕರಾಗಿ ಪಾಲ್ಗೊಳ್ಳುವರು.

ಕೆಸಿಐ ನೊಂದಿಗೆ ನೋಂದಾಯಿಸಲ್ಪಡದ ನಾಯಿಗಳಿಗೆ ಜೂನಿಯರ್ ಹ್ಯಾಂಡ್ಲಿಂಗ್ ಸ್ಪರ್ಧೆ (12ರಿಂದ 18 ವರ್ಷ), ಮಹಿಳೆಯರಿಗಾಗಿ ಹ್ಯಾಂಡ್ಲಿಂಗ್ ಸ್ಪರ್ಧೆ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಶ್ವಾನಗಳನ್ನು ಕೆಸಿಐ ನೊಂದಿಗೆ ನೋಂದಾಯಿಸಿಕೊಳ್ಳಲು ಇದೇ ವೇಳೆ ನೋಂದಣಿ ಶಿಬಿರ ಏರ್ಪಡಿಸಲಾಗಿದೆ.