ಜಿಲ್ಲೆ

ಮೀಸಲಾತಿ ಹೋರಾಟಕ್ಕೆ ಒಕ್ಕಲಿಗರು ಸಜ್ಜಾಗಿ: ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

Kolar

ಕೋಲಾರ: ಮೀಸಲಾತಿ ಹೆಚ್ಚಿಸದಿರುವ ಬಗ್ಗೆ ಒಕ್ಕಲಿಗರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ. ವಿಧಾನಸೌಧದ ಒಳಗೆ, ಹೊರಗೆ ಮತ್ತು ಕಾನೂನು ಸಮರಕ್ಕೆ ಸಜ್ಜಾಗಬೇಕೆಂಬ ಅಭಿಪ್ರಾಯ ಸಮುದಾಯದಲ್ಲಿ ಮೂಡುತ್ತಿದೆ. 1993ರಂತೆ ಮತ್ತೊಂದು ಹೋರಾಟಕ್ಕೆ ಕರೆದರೆ ಬರಲು ಸಿದ್ಧರಿರಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.


ನಗರದ ಹಳೆಯ ಬಸ್ ನಿಲ್ದಾಣ ಬಳಿ ಸೋಮವಾರ ಒಕ್ಕಲಿಗರ ಸಾಂಸ್ಕೃತಿಕ ಭವನಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಟಿ.ಚನ್ನಯ್ಯರಂಗ ಮಂದಿರದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಕೆಂಪೇಗೌಡರ 513ನೇ ಜಯಂತಿಯಲ್ಲಿ ಭಾಗವಹಿಸಿದ್ದ ಸುಂದರ ಪಲ್ಲಕ್ಕಿಗಳನ್ನು ನಿರ್ಮಿಸಿದ್ದವರಿಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಾನೂನು ಮಿತಿ ದಾಟಿ ಮೀಸಲಾತಿ ಪ್ರವಾಣ ಹೆಚ್ಚಿಸುವುದಾದರೆ ಶೇ.16ರಷ್ಟಿರುವ ಒಕ್ಕಲಿಗ ಸಮುದಾಯಕ್ಕೆ ಪ್ರಸ್ತುತ ಶೇ.4 ಮೀಸಲಾತಿ ಒದಗಿಸಿದ್ದು, ಇದನ್ನು ಶೇ.12ಕ್ಕೆ ಏರಿಸಬೇಕು ಎಂಬ ಬೇಡಿಕೆ ಸಮುದಾಯದಲ್ಲಿದೆ ಎಂದರು.


ಮೀಸಲಾತಿ ಅತ್ಯಗತ್ಯ: ಒಕ್ಕಲಿಗರು ಬರುವ ಪ್ರವರ್ಗ 3ಎ ದಲ್ಲಿ ಕೊಡವ, ಭಂಟ, ರೆಡ್ಡಿ ಮತ್ತು ಬಲಿಜ ಸಮುದಾಯ ಸೇರಿ ಹಲವು ಜಾತಿಗಳಿವೆ. ಶೇ. 4ರಷ್ಟಿರುವ ಮೀಸಲಾತಿಯಲ್ಲಿ ಶೇ.20 ಜನಸಂಖ್ಯೆ ಹಂಚಿಕೊಳ್ಳುವಂತಾಗಿದೆ. ಇದರಲ್ಲಿ ಶೇ.1.5ರಷ್ಟು ವಾತ್ರ ಒಕ್ಕಲಿಗರಿಗೆ ಸಿಗುತ್ತಿದೆ. ಈ ಅನ್ಯಾಯ ಸರಿಪಡಿಸಲು ಕೂಡಲೇ ಸರ್ಕಾರ ಮುಂದಾಗಬೇಕು. ಅಂಬೇಡ್ಕರ್ ಆಶಯವಾದ ಸಾವಾಜಿಕ ನ್ಯಾಯ ಒಕ್ಕಲಿಗ ಬಡವರಿಗೂ ಸಿಗಬೇಕು. ಮುಂದಿನ ಪೀಳಿಗೆ ರಾಜಕೀಯ, ಶೈಕ್ಷಣಿಕ ಹಾಗೂ ಸಾವಾಜಿಕವಾಗಿ ಮುಂದುವರಿಯಲು ಮೀಸಲಾತಿ ಅತ್ಯಗತ್ಯ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.


ನಿರ್ಗತಿಕರಿಗೆ ಸೌಲಭ್ಯ ಒದಗಿಸಿ: ಬೆಂಗಳೂರು ನಿರ್ವಾತೃ ಕೆಂಪೇಗೌಡರು ಎಲ್ಲ ಸಮುದಾಯಗಳಿಗೆ ಪೇಟೆಗಳನ್ನು ಸ್ಥಾಪಿಸಿ ವ್ಯಾಪಾರಕ್ಕೆ ಅನುಕೂಲ ವಾಡಿಕೊಟ್ಟಿದ್ದರು. ಅವರೆಲ್ಲೂ ಒಕ್ಕಲಿಗರಪೇಟೆ ಸ್ಥಾಪಿಸಲಿಲ್ಲ. ಸರ್ವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಒಕ್ಕಲಿಗರ ಬುಡವೇ ಭದ್ರವಾಗಿರದಿದ್ದರೆ ಇತರರನ್ನು ಕರೆದೊಯ್ಯುವುದಾದರೂ ಹೇಗೆ? ಸರ್ಕಾರ ಇದನ್ನು ಅರ್ಥೈಸಿಕೊಳ್ಳಬೇಕು. ಬೆಂಗಳೂರು ಸುತ್ತ ಶೇ.60 ಸಮುದಾಯವಿದ್ದು, ಬಹುತೇಕ ಮಂದಿ ಜಮೀನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಪ್ರಸ್ತುತ 1.5 ಕೋಟಿ ಜನಸಂಖ್ಯೆಯಿದ್ದು, 2050ಕ್ಕೆ 4.5ಕೋಟಿಯಾಗಲಿದೆ ಎಂದು ಮುಖ್ಯಮಂತ್ರಿಯವರೇ ಇತ್ತೀಚೆಗೆ ತಿಳಿಸಿದ್ದಾರೆ. ಹಾಗಾದರೆ 30 ವರ್ಷಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾವಾಂತರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಎಲ್ಲ ರೈತರು ಜಮೀನುಗಳನ್ನು ಕಳೆದುಕೊಳ್ಳುತ್ತಾರೆ. ಇಂತಹ ವಿಚಾರಗಳ ಬಗ್ಗೆ ಜನಪ್ರತಿನಿಧಿಗಳು ಹೋರಾಡಲು ಸಿದ್ಧರಿರಬೇಕು. ಮಠದ ಸಮೀಕ್ಷೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಸ್ಲಂನಲ್ಲಿ ಹೆಚ್ಚಿನ ಒಕ್ಕಲಿಗರು ವಾಸಿಸುತ್ತಿರುವುದು ಕಂಡುಬಂದಿದೆ. ಬೆಂಗಳೂರು ಅಭಿವೃದ್ಧಿಯಿಂದ ಹೆಚ್ಚು ಒಕ್ಕಲಿಗರು ನಿರ್ಗತಿಕರಾಗುತ್ತಿದ್ದಾರೆ. ಈ ಬಗ್ಗೆ ಮಠ, ಸಂ ಸೇರಿ ಸಮಿತಿ ರಚಿಸಿ ಸರ್ವೇ ಮಾಡುತ್ತೇವೆ ಎಂದು ಸ್ವಾಮೀಜಿ ಹೇಳಿದರು.


ಒಕ್ಕಲಿಗ ಎಂಬುದು ಜಾತಿಯಲ್ಲ, ಅದೊಂದು ಒಕ್ಕಲುತನ(ಕೃಷಿ) ಪರಂಪರೆ ಎಂಬುದನ್ನು ಒಪ್ಪುವಂತಹುದ್ದೇ. ಎಲ್ಲರೂ ಜಾತಿಯಿಂದ ಹೊರಬಂದರೆ ನಾವೂ ಹೊರಬರುತ್ತೇವೆ. ಹೋರಾಟ ಮಾಡುವವರು ಸೇರಿ ಎಲ್ಲರಿಗೂ ಅನ್ನ ಕೊಡುವ ಸಮುದಾಯಕ್ಕೆ ಹೋರಾಟ ಮಾಡುವುದೂ ಗೊತ್ತಿದೆ ಎಂದರು.
ಸರ್ಕಾರದ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲಾ ಒಕ್ಕಲಿಗರ ಸಂದ ಸಾಂಸ್ಕೃತಿಕ ಭವನ ನಿರ್ವಾಣಕ್ಕೆ ಶಾಸಕರ ನಿಧಿಯಿಂದ 25 ಲಕ್ಷ ರೂ. ಮತ್ತು ಹಿತೈಷಿಗಳಿಂದ 1 ಕೋ.ರೂ.ಸಂಗ್ರಹಿಸಿ ಕೊಡುತ್ತೇನೆ. ಬೆಂಗಳೂರು ಅಂತಾರಾಷ್ಟ್ರೀಯ ವಿವಾನ ನಿಲ್ದಾಣದಲ್ಲಿ ಸ್ಥಾಪಿಸಿರುವ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಮುಂದಿನ ತಿಂಗಳು ಲೋಕಾರ್ಪಣೆಯಾಗುತ್ತಿದ್ದು, ಪ್ರಧಾನಿ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಾತೀತವಾಗಿ ಆಗಮಿಸಬೇಕು ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ ಮಾತನಾಡಿ, ಕೋಲಾರದಲ್ಲಿ ಬಡಮಕ್ಕಳಿಗೆ ಪ್ರೋತ್ಸಾಹಿಸುವ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೇಂದ್ರ ಸ್ಥಾಪಿಸಿದ್ದು ಆಸಕ್ತರು ಇದರ ಸದ್ಬಳಕೆ ವಾಡಿಕೊಳ್ಳಬೇಕು. ಮುಂದಿನ ಕೆಂಪೇಗೌಡ ಜಯಂತಿ ಒಳಗೆ ಭವನ ನಿರ್ವಾಣಕ್ಕೆ ಎಲ್ಲರೂ ಕಟಿಬದ್ಧರಾಗಿ ಕೆಲಸ ಮಾಡೋಣ ಎಂದರು.
ಬೆಂಗಳೂರಿನ ವಿಶ್ವ ಒಕ್ಕಲಿಗರ ಮಠ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ನೆರವು ವಿತರಿಸಿದರು. ಒಕ್ಕಲಿಗ ಭವನ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು 1 ಕೋಟಿ ರೂ. ಒದಗಿಸುವುದಾಗಿ ಹಾಗೂ ಚಿದಾನಂದಗೌಡ ಶಾಸಕರ ನಿಧಿಯಿಂದ 25 ಲಕ್ಷ ರೂ. ಕೊಡುವುದಾಗಿ ೋಷಿಸಿದರು. ಜಿಲ್ಲಾ ಒಕ್ಕಲಿಗರ ಸಂ ಅಧ್ಯಕ್ಷ ಕೆ.ವಿ ಶಂಕರಪ್ಪ, ಶಾಸಕ ಕೆ.ವೈ. ನಂಜೇಗೌಡ, ಮಾಜಿ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಕೆ.ಎಸ್.ಮಂಜುನಾಥಗೌಡ, ಎಂಎಲ್ಸಿ ಅನಿಲ್ ಕುವಾರ್, ತೂಪಲ್ಲಿ ಚೌಡರೆಡ್ಡಿ, ಗುತ್ತಿಗೆದಾರ ಕಷ್ಣಾರೆಡ್ಡಿ, ಸವಾಜಸೇವಕ ಸಿಎಂಆರ್ ಶ್ರೀನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ, ರಾಜ್ಯ ಒಕ್ಕಲಿಗರ ಸಂ. ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ನಿರ್ದೇಶಕರಾದ ಡಾ.ಡಿ.ಕೆ.ರಮೇಶ್, ಯಲುವಹಳ್ಳಿ ರಮೇಶ್, ಜಿಲ್ಲಾ ಗೌರವಾಧ್ಯಕ್ಷ ಬಿಸಪ್ಪಗೌಡ, ಜಂಟಿ ಕಾರ್ಯದರ್ಶಿ ಕೆ.ವಿ.ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ನಂದಿನಿ ಪ್ರವೀಣ್‌ಗೌಡ ಇದ್ದರು.

ಪ್ರತಿಭೆ ಗುರುತಿಸದಿದ್ದರೆ ಅಪಾಯಕಾರಿ: ಯಾವುದೇ ಕ್ಷೇತ್ರದಲ್ಲಿ ಪ್ರತಿಭೆಯುಳ್ಳವರನ್ನು ಗುರುತಿಸುವುದು ನಾಗರಿಕ ಸವಾಜದ ಕರ್ತವ್ಯ. ಕರ್ಣನಲ್ಲಿ ಅಗಾಧ ಶಕ್ತಿಯಿದ್ದರೂ ರಾಜಮನೆತನದಿಂದ ಬಂದವನಲ್ಲವೆಂದು ಅಪವಾನಿಸಿದಾಗ ದುರ್ಯೋಧನ ಆಶ್ರಯ ನೀಡಿ ಉಪಯೋಗಿಸಿಕೊಂಡ. ಮಹಾಭಾರತ ಕಾಲದಲ್ಲೇ ಪ್ರತಿಭೆ ಸದ್ಭಳಕೆಯಾಗಲಿಲ್ಲ. ವಿಜ್ಞಾನಿ ಐನ್‌ಸ್ಟೀನ್ ಹಿಟ್ಲರ್ ಕಾಟ ತಪ್ಪಿಸಿಕೊಂಡು ಅಮೆರಿಕ ಸೇರಿದ್ದು, ಅವನ ಸೂತ್ರ ದುರ್ಬಳಕೆಯಾಗಿ ಹಿರೋಸಿವಾ, ನಾಗಾಸಾಕಿ ಮೇಲೆ ಪ್ರಥಮ ಅಣುಬಾಂಬ್ ಬೀಳಲು ಕಾರಣಕರ್ತನಾದ. ಇದನ್ನು ಅರಿತು ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರನ್ನು ಗುರುತಿಸಿ ಗೌರವಿಸದಿದ್ದರೂ ಪ್ರೋತ್ಸಾಹಿಸುವ ಕೆಲಸ ವಾಡೋಣ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಸಮುದಾಯದ ಮೇಲೆ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದ್ದೇ ಆದರೆ 1993ರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ವಾಜಿ ಪ್ರಧಾನಿ ದೇವೇಗೌಡರು ರೂಪಿಸಿದಂತೆ ಮತ್ತೊಂದು ಐತಿಹಾಸಿಕ ಹೋರಾಟ ರೂಪುಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಹೋರಾಟಕ್ಕೆ ಕರೆ ಕೊಟ್ಟಾಗ ಸಮುದಾಯದ ಎಲ್ಲರೂ ಸಹಸ್ರ ಸಂಖ್ಯೆಯಲ್ಲಿ ಬರಬೇಕು.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ಇತರ ಸಮುದಾಯದವರಿಗೆ ಸರ್ಕಾರ ಮೀಸಲಾತಿ ಒದಗಿಸುತ್ತಿರುವುದಕ್ಕೆ ನಮ್ಮ ವಿರೋಧವಿಲ್ಲ. ಸರ್ಕಾರ ಮೀಸಲಾತಿ ಹೆಚ್ಚಿಸುತ್ತಿರುವ ವೇಗ ಗಮನಿಸಿದರೆ ಶೇ.200ರಷ್ಟು ಮೀಸಲಾತಿ ನೀಡಬೇಕಾಗಬಹುದೇನೋ. ಒಕ್ಕಲಿಗರ ಮೀಸಲಾತಿ ಶೇ.12ಕ್ಕೆ ಏರಿಸದಿದ್ದರೆ ಮತ್ತೊಂದು ಐತಿಹಾಸಿಕ ಹೋರಾಟ ನಿಶ್ಚಿತ. ಸಂವಿಧಾನದ ಆಶಯಕ್ಕೆ ಧಕ್ಕೆ ತಂದರೆ ನಮಗೆ ಅನ್ಯಾಯವಾಗುತ್ತದೆ.
ಶ್ರೀ ನಂಜಾವಧೂತ ಸ್ವಾಮೀಜಿ, ಪೀಠಾಧ್ಯಕ್ಷರು, ಪಟ್ಟನಾಯಕನಹಳ್ಳಿ ಮಠ