ಜಿಲ್ಲೆ

ಒಪ್ಪಂದದ ಅಭ್ಯರ್ಥಿಗಳಿಗೆ ಗೆಲುವು - ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

Mangaluru - Nishantha Narayana

ವಿಟ್ಲ: ಅಳಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಒಪ್ಪಂದದ ಅಭ್ಯರ್ಥಿಗಳಿಗೆ ಜಯ ಲಭಿಸಿದ್ದು, ಬಂಡಾಯ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗವಾಗಿದೆ. ೧೨ ಸ್ಥಾನಗಳಲ್ಲಿ ೧೦ ಬಿಜೆಪಿ ಹಾಗೂ ೨ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ರೂಪೇಶ್ ರೈ, ಚೆನ್ನಪ್ಪ ಅಳಿಕೆ, ಸುಂದರ ನೆಗಳಗುಳಿ, ಗೀತಲತಾ ಶೆಟ್ಟಿ, ಸರಸ್ವತಿ ಅವಿರೋಧ ಆಯ್ಕೆಯಾಗಿದ್ದರು. ಸಾಮಾನ್ಯ ಕ್ಷೇತ್ರದಿಂದ ಕೆ. ಈಶ್ವರ ಭಟ್, ಆನಂದ ಶೆಟ್ಟಿ, ಚಂದ್ರನಾಥ ಆಳ್ವ, ಭಾಸ್ಕರ ಎಂ., ಸೀತಾರಾಮ ಶೆಟ್ಟಿ ಎಂ., ಸಾಲಗಾರರಲ್ಲದ ಕ್ಷೇತ್ರದಲ್ಲಿ ಮಹೇಶ್ ಅಳಿಕೆ, ಹಿಂದುಳಿದ ವರ್ಗ ಎಯಲ್ಲಿ ಎ. ವಸಂತ ಆಯ್ಕೆಯಾಗಿದ್ದಾರೆ.

ಬಂಡಾಯ ಅಭ್ಯರ್ಥಿಗಳಾಗಿ ಸ್ಪಽಸಿದ ಅಣ್ಣು ಕುಲಾಲ್, ನರಸಿಂಹ ಬಲ್ಲಾಳ್, ಬಾಲಕೃಷ್ಣ ಪೂಜಾರಿ, ವಿ. ಗೋವಿಂದ ಭಟ್, ಸೂರ್ಯನಾಥ ಆಳ್ವ, ಲಕ್ಷ್ಮೀ ವಿ. ಭಟ್, ಎಂ. ರಾಘವ ಸೋಲು ಕಂಡಿದ್ದಾರೆ.

ಚುನಾವಣೆ ಮಾಡದೆ ಅದರಲ್ಲಿ ಉಳಿಕೆಯಾದ ಹಣವನ್ನು ಸದಸ್ಯರಿಗೆ ಲಾಭಾಂಶವಾಗಿ ವಿತರಿಸುವ ಯೋಚನೆಯಲ್ಲಿ ಹಳೆಯ ಆಡಳಿತ ಮಂಡಳಿ ಪ್ರಯತ್ನ ಮಾಡಿತ್ತು. ಈಗಿರುವ ಸದಸ್ಯರ ಪೈಕಿ ಮೂವರು ಹುದ್ದೆ ತ್ಯಾಗ ಮಾಡಿ, ಬಂಡಾಯದವರಿಗೆ ನೀಡುವುದಕ್ಕೂ ಮುಂದಾಗಿದ್ದರು. ಆದರೆ ಇದಕ್ಕೆ ಕೆಲವರು ಒಪ್ಪದ ಕಾರಣದಿಂದ ಕೆಲವು ವರ್ಷಗಳಿಂದ ನಡೆಯದ ಚುನಾವಣೆ ನಡೆಯುವಂತಾಗಿತ್ತು.