ಪೊಟ್ಟಡ್ಕದಲ್ಲಿ ಬಿಲ್ಲಂಪದವು ಆರೋಗ್ಯ ಉಪ ಕೇಂದ್ರ ನಿರ್ಮಾಣಕ್ಕೆ ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನಡೆಸಿದರು. ಪದ್ಮನಾಭ ಪೂಜಾರಿ ಸಣ್ಣಗುತ್ತು, ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ರಂಜಿತ್ ಬಂಗೇರ ಇದ್ದರು.
- ಶಾಸಕ ಅಶೋಕ್ ಕುಮಾರ್ ರೈ ಪ್ರತಿಪಾದನೆ
- ಆರೋಗ್ಯ ಉಪಕೇಂದ್ರಕ್ಕೆ ಶಿಲಾನ್ಯಾಸ
ವಿಟ್ಲ: ಅಳಿಕೆ ಗ್ರಾಮಕ್ಕೆ ಕಳೆದ ಮೂರು ವರ್ಷದಲ್ಲಿ 10 ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನು ಎರಡು ವರ್ಷದಲ್ಲಿ 2ರಿಂದ 3 ಕೋಟಿ ನೀಡುವ ಮೂಲಕ ಇತಿಹಾಸ ಸೃಷ್ಟಿಸಲಾಗುವುದು. ಜನರಿಗೆ ವಿದ್ಯಾಭ್ಯಾಸ, ಉದ್ಯೋಗ, ಆಸ್ಪತ್ರೆಯ ಮೂಲ ಆವಶ್ಯಕತೆಯಾಗಿದೆ. ಸರ್ಕಾರ ಇದನ್ನು ಪೂರೈಸುವ ಕಾರ್ಯ ಮಾಡುತ್ತಿದೆ. ಎಸ್‌ಐಆರ್ ಪ್ರಕ್ರಿಯೆಗೆ ಪ್ರತಿಯೊಬ್ಬರೂ ಸಹಕಾರ ನೀಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅಳಿಕೆ ಗ್ರಾಮದ ಪೊಟ್ಟಡ್ಕದಲ್ಲಿ ಬಿಲ್ಲಂಪದವು ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಬ್ಲಾಕ್ ಮಾಜಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಪ್ರಮುಖರಾದ ರಂಜಿತ್ ಬಂಗೇರ, ಎಂ.ಎಸ್.ಮಹಮ್ಮದ್, ಪಂಚಾಯಿತಿ ಮಾಜಿ ಸದಸ್ಯ ಜಗದೀಶ ಶೆಟ್ಟಿ, ಸೀತಾರಾಮ ಶೆಟ್ಟಿ, ಸುಕುಮಾರ, ರವೀಶ, ಸದಾಶಿವ, ಬಬಿತಾ, ಗಿರಿಜಾ, ಶಾಂಭವಿ, ಸುಧಾರಕ ಮಡಿಯಾಲ, ತಾಲೂಕು ಆರೋಗ್ಯಾಧಿಕಾರಿ ಅಶೋಕ್ ರೈ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮುರಳಿ, ಉಪಕೇಂದ್ರದ ವೈದ್ಯೆ ರಂಜಿತಾ ಕೆ., ಆರೋಗ್ಯ ಕೇಂದ್ರದ ಜಯಲಕ್ಷ್ಮೀ, ಆಶಾ ಕಾರ್ಯಕರ್ತೆಯರಾದ ಸುಮಾ, ಡೀಲಾಕ್ಷಿ ಇದ್ದರು.
ಅಳಿಕೆ ಗ್ರಾಮದಲ್ಲಿ ಅಭಿವೃದ್ಧಿ ಪರ್ವ
2 ಕೋಟಿಯಲ್ಲಿ ಕಾಂಕ್ರೀಟೀಕರಣಗೊಂಡ ದೂಜಮೂಲೆ-ನೆಕ್ಕರೆ -ನೆಕ್ಕಿತಪುಣಿ ರಸ್ತೆಯ ಉದ್ಘಾಟನೆ ನಡೆಯಿತು. ಪೊಟ್ಟಡ್ಕದಲ್ಲಿ ಬಿಲ್ಲಂಪದವು ಆರೋಗ್ಯ ಉಪಕೇಂದ್ರ ಕಟ್ಟಡಕ್ಕೆ 65 ಲಕ್ಷ, ಶ್ರೀ ವಿಶ್ವಕರ್ಮ ಸೇವಾ ಸಮಿತಿ ಪಾಕಶಾಲೆ ಕಟ್ಟಡ ಅಭಿವೃದ್ಧಿ 4 ಲಕ್ಷ, ಮೂವಾಜೆ ಶ್ರೀ ದೂಮಾವತಿ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ, ಎರುಂಬು ಹೊಳೆ ಬದಿಗೆ ತಡೆಗೋಡೆ ನಿರ್ಮಾಣ 20 ಲಕ್ಷ, ಕಾನತ್ತಡ್ಕ-ಗೋಳಿಯಾಡಿ ರಸ್ತೆ 10 ಲಕ್ಷ, ಬಿಟ್ಟಿಮೂಲೆ ಪರಿಶಿಷ್ಟ ಜಾತಿ ಕಾಲೋನಿಗೆ ರಸ್ತೆ 15 ಲಕ್ಷ, ಕೊಟೆತ್ತಡ್ಕ ನಿವೇಶನ ಜಮೀನಿಗೆ ರಸ್ತೆ 10 ಲಕ್ಷ, ಮುಳಿಯ ಅಂಗನವಾಡಿ ಕಟ್ಟಡ 8 ಲಕ್ಷ, ಮುಳಿಯ ರಸ್ತೆ 5 ಲಕ್ಷ, ತಾಳಿಪಡ್ಪು-ತಾಮ್ರಕಜೆ ರಸ್ತೆ 10 ಲಕ್ಷ, ಗಂಗೆಮೂಲೆ ಹಾಗೂ ಎರುಂಬು ಭಾಗದಿಂದ ಎರುಂಬು ಶಂಕರ ನಾರಾಯಣ ದೇವಸ್ಥಾನ ರಸ್ತೆ 20 ಲಕ್ಷ, ಕೊಲ್ಯ ಓಟೆಮಾರು ರಸ್ತೆ 10 ಲಕ್ಷ, ಕಲ್ಲಜೇರ ಕೊಟ್ಟತ್ತೋಡು ರಸ್ತೆ 10 ಲಕ್ಷ, ಕಲ್ಲಜೇರ ಮಣ್ಣಾಪು ಪರಿಶಿಷ್ಟ ಜಾತಿ ಕಾಲೊನಿ ಸಂಪರ್ಕ ರಸ್ತೆ 10 ಲಕ್ಷ, ಶಾರದಾ ವಿಹಾರ ಪಡೀಲು ಬಳಕ್ಕ ರಸ್ತೆ 5.05 ಲಕ್ಷ, ಪುಳಿಂಚಾರು ಕೋಳಿಂಞಮಾರು ಪಡಿಬಾಗಿಲು ರಸ್ತೆ 15 ಲಕ್ಷ ಅಭಿವೃದ್ಧಿಗೆ ಇಟ್ಟಿದ್ದು, ಶಿಲಾನ್ಯಾಸ ನಡೆಸಲಾಯಿತು.