ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಆಕ್ವಾ ತಂಡ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ೨೦೨೪-೨೫ ಸಾಲಿನ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ೨ ಚಿನ್ನ, ೧೪ ಬೆಳ್ಳಿ , ೭ ಕಂಚಿನ ಪದಕದೊಂದಿಗೆ ಒಟ್ಟು ೪೭ ಅಂಕ ಗಳಿಸಿ ೧೭ರ ವಯೋಮಾನದ ಬಾಲಕರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
೧೦ನೇ ತರಗತಿ ಪವನ್ ರೈ ಕೆ. -೧ಚಿನ್ನ, ೨ ಬೆಳ್ಳಿ, ೧ ಕಂಚು, ೯ನೇ ತರಗತಿಯ ಅಖಿಲ್ ಆರ್ ಎಲ್-೧ ಚಿನ್ನ, ೨ ಬೆಳ್ಳಿ, ೧ ಕಂಚು, ೧೦ನೇ ತರಗತಿ ಚಿರಂತ್ ಬಿ.ಎಂ - ೩ ಬೆಳ್ಳಿ, ೨ ಕಂಚು, ೧೦ನೇ ತರಗತಿ ಉಜ್ವಲ್ ಎನ್ - ೩ ಬೆಳ್ಳಿ, ೧೦ನೇ ತರಗತಿ ದಿಶಾಂತ್ ಎಚ್. - ೧ ಬೆಳ್ಳಿ, ೧ ಕಂಚು, ೯ನೇ ತರಗತಿ ಶ್ರೇಯಸ್ ಕೆ. ಆರ್ - ೧ ಬೆಳ್ಳಿ, ೯ನೇ ತರಗತಿ ನಮನ್ ಎಸ್. ವಿ - ೧ ಬೆಳ್ಳಿ, ೧೦ನೇ ತರಗತಿ ಗೋಕುಲ್ ಚಂದ್ರ ಕೆ. ಎಸ್ - ೧ ಬೆಳ್ಳಿ, ೧ ಕಂಚು, ೧೦ನೇ ತರಗತಿ ಉತ್ತಮ್ ವಿ -೧ ಕಂಚು, ತೇಜಸ್ ಎಂ ಎಸ್ ೧೦ನೇ ತರಗತಿ-೧ ಕಂಚು ಪಡೆದುಕೊಂಡಿದ್ದಾರೆ. ಒಟ್ಟು ಏಳು ಈಜು ಪಟುಗಳು ಅ.೯ ಮತ್ತು ೧೦ರಂದು ಬೆಂಗಳೂರು ಬಸವನಗುಡಿಯಲ್ಲಿ ನಡೆಯುವ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.