ಅಲ್ಕೋಹಾಲಿಕ್​ ಅನಾನಿಮಸ್​ ಸಂಸ್ಥೆ 
ಜಿಲ್ಲೆ

ಆಲ್ಕೋಹಾಲಿಕ್​ ಅನಾನಿಮಸ್​ ಸಂಸ್ಥೆ ವಾರ್ಷಿಕೋತ್ಸವ

ವಿಜಯಪುರ : ಕುಡಿತ ಚಟದಿಂದ ಹೊರಬರಲು ಶ್ರಮಿಸುತ್ತಿರುವವರ ಪಾಲಿನ ಆಶಾಕಿರಣವಾಗಿರುವ ಆಲ್ಕೋಹಾಲಿಕ್​ ಅನಾನಿಮಸ್​ (ಎ.ಎ.) ಸಂಸ್ಥೆಯ ವಾರ್ಷಿಕೋತ್ಸವ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜು. 12 ಮತ್ತು 13 ರಂದು ನಡೆಯಲಿದೆ.

12 ರಂದು ಮಧ್ಯಾಹ್ನ 4 ಗಂಟೆಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಸಂಸ್ಥೆಯ ಸದಸ್ಯರು ಪಾಲ್ಗೊಂಡು ಕುಡಿತ ರಹಿತ ಜೀವನದ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಜು. 13 ರಂದು ಬೆಳಗ್ಗೆ 10ಕ್ಕೆ ನಡೆಯುವ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಲಿದ್ದಾರೆ.

ಅತೀವ ಕುಡಿತದ ದಾಸರಾಗಿದ್ದ ಒಬ್ಬ ಶೇರು ದಲ್ಲಾಳಿ ಮತ್ತು ವೈದ್ಯ ಇಬ್ಬರೂ ಕುಡಿತ ಚಟದಿಂದ ವಿಮುಕ್ತಿ ಹೊಂದಿ, ಕುಡಿತದ ಚಟದಿಂದ ಬಳಲುತ್ತಿರುವವರು ಕುಡಿತ ರಹಿತ ಜೀವನ ಸಾಗಿಸಲು ಸಹಾಯ ಮಾಡಬೇಕೆಂಬ ಉದ್ದೇಶದಿಂದ 1935 ಜೂ. 10 ರಂದು ಅಮೆರಿಕಾದ ನ್ಯೂಯಾರ್ಕ್​ನಲ್ಲಿ ಆಲ್ಕೋಹಾಲಿಕ್​ ಅನಾನಿಮಸ್​ ಸಂಸ್ಥೆ ಸ್ಥಾಪಿಸಿ, ವಿಶ್ವದ 195ಕ್ಕಿಂತ ಅಧಿಕ ದೇಶಗಳಲ್ಲಿ ಎ.ಎ. ಸಂಸ್ಥೆಯ ಕಾರ್ಯಕ್ಷೇತ್ರವನ್ನು ವಿಸ್ತರಿಸಿ, ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿ, ಕುಡಿತ ಮುಕ್ತರಾಗಲು ಉಚಿತವಾಗಿ ಸಹಾಯ ಮಾಡುತ್ತಿದ್ದಾರೆ. ಸಂಸ್ಥೆಯ ಸಹಾಯದಿಂದಲೇ ಜಿಲ್ಲೆಯ 200ಕ್ಕೂ ಅಧಿಕ ಕುಟುಂಬದ ಸದಸ್ಯರು ಕುಡಿತ ಮುಕ್ತರಾಗಿ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡುವಂತೆ ಪ್ರಕಟಣೆಯು ತಿಳಿಸಿದೆ.