ಗೋವಾದಿಂದ ಮದ್ಯ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ ಮದ್ಯ ಹಾಗೂ ಸಾಗಣೆ ಮಾಡಿದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಜಂಟಿ ಆಯುಕ್ತ ವೈ.ಮಂಜುನಾಥ, ಜಯರಾಮೇಗೌಡ, ಚನಗೌಡ ಎಸ್. ಪಾಟೀಲ ಹಾಗೂ ಸಿಬ್ಬಂದಿ ಇದ್ದಾರೆ. 
ಜಿಲ್ಲೆ

ಮದ್ಯ ಅಕ್ರಮ ಸಾಗಣೆ, ಓರ್ವನ ಬಂಧನ

ಬೆಳಗಾವಿ: ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ನಿರೀಕ್ಷಕರು ಬಂಧಿಸಿದ್ದು, ಗೂಡ್ಸ್ ವಾಹನ ಹಾಗೂ 8,59,456 ರೂ. ಮೌಲ್ಯದ 1,087 ಲೀ. ಮದ್ಯವನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.

ಗಜರಾತ್‌ನ ಅಹಮ್ಮದಾಬಾದ್ ನಿವಾಸಿ ರಿತೇಶಬಾಯಿ ಪಾಟೀಲ ಬಂಧಿತ. ಗೋವಾದಿಂದ ಅಕ್ರಮವಾಗಿ ಮದ್ಯದ ಬಾಕ್ಸ್‌ಅನ್ನು ಗೂಡ್ಸ್ ಕೆರಿಯರ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಕಣಕುಂಬಿ ಬಳಿ ದಾಳಿ ನಡೆಸಿದ ಅಬಕಾರಿ ಪೊಲೀಸರು, ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಮದ್ಯಗಳಲ್ಲಿ ಗೋವಾದ 125ಕ್ಕೂ ಹೆಚ್ಚು ವಿಧದ ಮದ್ಯವಿತ್ತು ಎಂದು ಅಬಕಾರಿ ಜಂಟಿ ಆಯುಕ್ತ ವೈ.ಮಂಜುನಾಥ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತ ಜಯರಾಮೇಗೌಡ, ಅಬಕಾರಿ ಉಪ ಅಧೀಕ್ಷಕ ಚನಗೌಡ ಎಸ್.ಪಾಟೀಲ, ಎಸ್.ಎಂ. ಪೂಜಾರಿ, ಬಿ.ಎ. ಪಾಂಗೇರಿ, ಸುನೀಲ ಪಾಟೀಲ, ಎಂ.ಎಫ್. ಕಟಗೆಣ್ಣವರ ಹಾಗೂ ಅಬಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು.