ಕುರುಗೋಡು: ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಅಪ್ರಾಪ್ತರು ಹಾಗೂ ಯುವಕರು ವ್ಯಸನಕ್ಕೆ ದಾಸರಾಗುತ್ತಿದ್ದರೂ ನಿರ್ಲಕ್ಷೃ ವಹಿಸಲಾಗಿದೆ.
ವದ್ದಟ್ಟಿ, ಸಿದ್ದಮ್ಮನಹಳ್ಳಿ, ಮಾರುತಿ ಕ್ಯಾಂಪ್, ಕಲ್ಲುಕಂಬ, ಕೆರೆಕೆರೆ, ಲಕ್ಷ್ಮೀಪುರ, ಸೋಮಲಾಪುರ, ಓರ್ವಾಯಿ, ಗುತ್ತಿಗನೂರು, ದಮ್ಮೂರು ಸೇರಿದಂತೆ ಬಹುತೇಕ ಗ್ರಾಮಗಳ ಗೂಡಂಗಡಿ, ಕಿರಾಣಿ ಅಂಗಡಿ, ಹೊರವಲಯದ ಶೆಡ್, ಧಾಬಾಗಳಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಹಳ್ಳಿಗಳಲ್ಲಿ ಸುಲಭವಾಗಿ ಸಿಗುವ ಮದ್ಯದಿಂದಾಗಿ ವಿದ್ಯಾರ್ಥಿಗಳು ಕೂಡ ವ್ಯಸನಿಗಳಾಗುತ್ತಿದ್ದಾರೆ. ಮದ್ಯವ್ಯಸನಿ ಯುವಕರು ಪಾಲಕರೊಂದಿಗೆ ಜಗಳವಾಡುತ್ತಿರುವ ನಿದರ್ಶನಗಳು ಇವೆ. ಇನ್ನು ಕೆಲವರು ಮಡದಿ-ಮಕ್ಕಳೊಂದಿಗೆ ಗಲಾಟೆ ಮಾಡಿಕೊಳ್ಳುವುದು, ದಾರಿಯಲ್ಲಿ ಹೋಗುವ ಜನರನ್ನು ನಿಂದಿಸುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಕಲ್ಲುಕಂಬ ಗ್ರಾಮದ ಕಾಲೇಜು ವಿದ್ಯಾರ್ಥಿಗಳು ರಾತ್ರಿ ಮದ್ಯ ಸೇವಿಸಿ ಬಡಿದಾಡಿಕೊಂಡಿರುವ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.
ಹಣದಾಸೆ ಮತ್ತು ಮಾರಾಟದ ಗುರಿ ಮುಟ್ಟುವ ಉದ್ದೇಶದಿಂದ ಬಾರ್ ಮಾಲೀಕರು ಹಳ್ಳಿಗಳಿಗೆ ಮದ್ಯ ಸರಬಾರಾಜು ಮಾಡುತ್ತಿರುವ ಆರೋಪ ಇದೆ. ಅಧಿಕಾರಿಗಳು ಸಭೆ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಅಂಗಡಿ, ಶೆಡ್, ಧಾಬಾಗಳಿಗೆ ವಿತರಿಸದಂತೆ ಎಚ್ಚರಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಮಾರಾಟದ ಗುರಿಯಿಂದಾಗಿ ಅವಾಂತರ
ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದಾಗ ಮದ್ಯದ ಅಕ್ರಮ ಮಾರಾಟಕ್ಕೆ ಕಡಿವಾಣ ಬೀಳುತ್ತದೆ. ಒಂದು ವಾರದ ಬಳಿಕ ಮತ್ತೆ ಎಂದಿನಂತೆ ಮಾರಾಟ ಶುರುವಾಗುತ್ತದೆ. ಕಲ್ಲುಕಂಬ, ಕೆರೆಕೆರೆ ಗ್ರಾಮದ ಕೆಲವರು ಮದ್ಯ ಕ್ರಮ ಮಾರಾಟ ತಡೆಯುವಂತೆ ಜಿಲ್ಲಾಧಿಕಾರಿ ಮೊರೆ ಹೋಗಿದ್ದರು. ಇದರ ಪರಿಣಾಮ ಕಿರಾಣಿ ಅಂಡಿಗಳಲ್ಲಿ ಮಾರಾಟಕ್ಕೆ ಬ್ರೇಕ್ ಬಿದ್ದಿದೆಯಾದರೂ ಗ್ರಾಮಗಳ ಹೊರವಲಯದಲ್ಲಿ ಸೆಡ್ಡುಗಳು ತಲೆಯೆತ್ತಿವೆ.
ನೆಪ ಮಾತ್ರಕ್ಕೆ ದಾಳಿ ?
ಗ್ರಾಮಸ್ಥ, ಕುರುಗೋಡುಇತ್ತೀಚಿಗೆ ಕುರುಗೋಡಿನ ವಿವಿಧ ಬಡಾವಣೆಯಲ್ಲಿ ಮದ್ಯ ಸೇವಿಸುತ್ತಿರುವವರಿಗೆ ಪೊಲೀಸರು ದಂಡ ಹಾಕಿದ್ದಾರೆ. ಆದರೆ, ಧಾಬಾಗಳಲ್ಲಿ ಮಾರಾಟ ಮಾಡುವವರು ಹಾಗೂ ಕುಡಿಯುವವರ ವಿರುದ್ಧ ಯಾವುದೇ ಕ್ರಮ ವಹಿಸುತ್ತಿಲ್ಲ. ಈ ಇಬ್ಬಗೆಯ ನೀತಿ ಸರಿಯಲ್ಲ. ಅಬಕಾರಿ ನಿರೀಕ್ಷಕಿ, ಕಂಪ್ಲಿಉಷಾತಾಲೂಕಿನ ಅನೇಕ ಕಡೆ ದಾಳಿ ನಡೆಸಿ ಆಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ದೂರು ದಾಖಲು ಮಾಡಿ ದಂಡ ಹಾಕಲಾಗಿದೆ. ಮತ್ತೆ ಮಾರಾಟಕ್ಕೆ ಮುಂದಾಗಿರುವ ಬಗ್ಗೆ ಗ್ರಾಮಸ್ಥರು ನಮ್ಮ ಗಮನಕ್ಕೆ ತಂದರೆ ಕೂಡಲೇ ಕ್ರಮ ವಹಿಸಲಾಗುವುದು.
ಪಿಎಸ್‌ಐ, ಕುರುಗೋಡು
ಸುಪ್ರೀತ್ ವಿರೂಪಾಕ್ಷಪ್ಪ
ಬಾರ್ ಮಾಲೀಕರ ಸಭೆ ಕರೆದು ಗ್ರಾಮೀಣ ಭಾಗದ ಅಂಗಡಿಗಳಿಗೆ ಸರಬರಾಜು ಮಾಡದಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಹೆಚ್ಚು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರೆಸ್ಟೋರೆಂಟ್ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಿ ಕಠಿಣ ಕ್ರಮಕೈಗೊಳ್ಳಲಾಗುವುದು
ಶಾಸಕ, ಕಂಪ್ಲಿಜೆ.ಎನ್ ಗಣೇಶ್ಗ್ರಾಮಸ್ಥರು ನೀಡಿದ್ದ ಮಾಹಿತಿ ಮೇರೆಗೆ ಹಲವೆಡೆ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಿಸಲಾಗಿದೆ. ಈಗಲೂ ಅಕ್ರಮವಾಗಿ ಮದ್ಯ ಮಾರಾಟ ನಡೆದಿದ್ದರೆ ನನಗೆ ಮಾಹಿತಿ ನೀಡಿದ ಒಂದೇ ದಿನದಲ್ಲಿ ಕ್ರಮ ವಹಿಸಲಾಗುವುದು.