ಕೆ.ಆರ್.ಸಾಗರ-ಪಾಂಡವಪುರ ರಸ್ತೆಯಲ್ಲಿನ ಮೀನು ಮಾರಟ ಮಳಿಗೆಗೆ ಕೆ.ಆರ್.ಸಾಗರ ಪಿ.ಎಸ್‌ಐ ರಮೇಶ ಕರಕಿಕಟ್ಟಿ ಭೇಟಿ ನೀಡಿ ಚರ್ಚಿಸಿದರು. 
ಜಿಲ್ಲೆ

ಮಳಿಗೆಯಲ್ಲಿ ಮದ್ಯ ಸೇವನೆಗೆ ಅವಕಾಶ ಬೇಡ

ಅಭಿನಯ್ ಎಚ್.ಎಂ

ಕೆ.ಆರ್.ಸಾಗರ: ಮೀನು ಮಾರಟ ಮಳಿಗೆಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ನೀಡಬಾರದು ಎಂದು ಪಿಎಸ್‌ಐ ರಮೇಶ ಕರಕಿಕಟ್ಟಿ ಸೂಚನೆ ನೀಡಿದರು.

ಮೀನು ಮಾರಟ ಮಳಿಗೆಯಲ್ಲಿ ಕೊಲೆ ನಡೆದಿದ್ದ ಹಿನ್ನೆಲೆಯಲ್ಲಿ ಸೋಮವಾರ ನಾರ್ತ್ ಬ್ಯಾಂಕ್ ಬಳಿಯ ರಸ್ತೆ ಪಕ್ಕದಲ್ಲಿರುವ ಮೀನು ಮಾರಾಟ ಮಳಿಗೆಗಳ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದವರಿಗೆ ಮೀನು ಕೊಡಬಾರದು. ರಸ್ತೆ ಸಂಚಾರಕ್ಕೆ ಅಡ್ಡಿಯಾಗುವುದು ಕಂಡು ಬಂದರೆ ಹಾಗೂ ಅಕ್ರಮ ಚಟುವಟಿಕೆ ನಡೆಸುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ಅಂಗಡಿಗಳ ಮುಂದೆ ಯಾವುದೇ ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸುವುದರ ಜತೆಗೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ತಿಳಿಸಿದರು.