ದೇವದುರ್ಗ: ತಾಲೂಕಿನ ಗಲಗ ಸಮೀಪದ ಆಲ್ಕೋಡ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಡಿಪೋ ಮ್ಯಾನೇಜರ್ ರಾಮನಗೌಡಗೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮುಖಂಡರು ಗುರುವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: Jammu and Kashmir | ಬಂಡಿಪೋರಾದಲ್ಲಿ ಕಂದಕಕ್ಕೆ ಬಿದ್ದ ಸೇನಾ ವಾಹನ; ಇಬ್ಬರು ಯೋಧರು ಹುತಾತ್ಮ.. ಮೂವರ ಸ್ಥಿತಿ ಚಿಂತಾಜನಕ
ದೇವದುರ್ಗದಿಂದ ಆಲ್ಕೋಡ್‌ಗೆ ಹೋಗಲು ಬಸ್ ಕೊರತೆಯಿದ್ದು ಎರಡ್ಮೂರು ಕಡೆ ಇಳಿದು ತೆರಳುವ ಸ್ಥಿತಿಯಿದೆ. ಗಲಗ, ಅರಕೇರಾ ಇಲ್ಲವೆ ಸಿರವಾರಗೆ ಹೋಗಿ ಆಲ್ಕೋಡ್‌ಗೆ ತಲುಪುವ ಸ್ಥಿತಿಯಿದೆ. ಸರಿಯಾಗಿ ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು, ಜನರಿಗೆ ಸಮಸ್ಯೆಯಾಗುತ್ತಿದ್ದು, ದುಬಾರಿ ಹಣ ನೀಡಿ ಖಾಸಗಿ ವಾಹನಗಳಲ್ಲಿ ಓಡಾಡುವಂತಾಗಿದೆ.
ಅರಕೇರಾ, ಗಲಗ, ಸಿರವಾರಗೆ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಅವಲಂಬಿಸಬೇಕಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದೇವದುರ್ಗ, ಮರಿಗೆಮ್ಮ ದಿಬ್ಬಿ, ಎಚ್.ಎನ್.ತಾಂಡಾ, ಸಮುದ್ರ, ಪಂದ್ಯಾನ, ಬಿ.ಗಣೇಕಲ್, ಅರಕೇರಾ ಮಾರ್ಗವಾಗಿ ಆಲ್ಕೋಡ್‌ಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾರ್ಯದರ್ಶಿ ಎಸ್.ನರಸಣ್ಣಗೌಡ ನಾಯಕ, ಪ್ರಮುಖರಾದ ಗುರುಬಸವ, ಅನಿಲ್‌ಕುಮಾರ ಇತರರಿದ್ದರು.