ಅಳವಂಡಿ: ಗ್ರಾಮೀಣ ಭಾಗದ ಜನರು ಸರ್ಕಾರದ ಆರೋಗ್ಯದ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲಿ ಎಂದು ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘದ ಕಲಾವಿದ ವಿರೇಶ ಹಾಲಗುಂದಿ ತಿಳಿಸಿದರು.
ಸಮೀಪದ ಕವಲೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕವಲೂರ, ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘದ ಕಲಾತಂಡದ ಸಹಯೋಗದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಸರ್ಕಾರಿ ಸೇವೆಗಳು ಮತ್ತು ಸಾಂಕ್ರಾಮಿಕ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಬೀದಿ ನಾಟಕಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸತತವಾಗಿ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಕುಷ್ಠರೋಗ ನಿರ್ಮೂಲನೆ, ಸ್ನೇಹ ಕ್ಲಿನಿಕ್, ತಾಯಿ ಕಾರ್ಡ್, ತಾಯಿ ಮಗುವಿನ ಆರೈಕೆ, ಲಸಿಕೆ, ಡಯಾಬಿಟಿಸ್, ಶುಗರ್, ಹೃದಯ ರೋಗ ಕಾಯಿಲೆಗಳ ನಿಯಂತ್ರಣ ಹಾಗೂ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ಜಾನಪದ ಸಂಗೀತದ ಮೂಲಕ ಜಾಗೃತಿ ಮೂಡಿಸಲಾಯಿತು.
ಕಲಾವಿದರಾದ ಮಹಾದೇವಪ್ಪ ಐನಕ್ಕನವರ, ವಿರುಪಾಕ್ಷಿ ಎಡಿಯಾಪುರ, ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ದಾವಲಸಾಬ ಅತ್ತಾರ, ವಸಂತ ಉಳ್ಳಾಗಡ್ಡಿ, ಸಿದ್ದಲಿಂಗಮ್ಮ ಹಾಲಗುಂಡಿ, ಶಿವಲಿಂಗಮ್ಮ ಹಲಗಿ, ಆಶಾ ಕಾರ್ಯಕರ್ತರಾದ ಚನ್ನಮ್ಮ, ಲಲಿತಾ, ಹೂವಕ್ಕ, ಸೀಮಾ, ಈರಮ್ಮ, ರಣಧಮ್ಮ ಇತರರಿದ್ದರು.