ಅಳವಂಡಿ ಮುದಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ಆಯೋಜನೆ ಕುರಿತು ಪೂರ್ವಭಾವಿ ಸಭೆ ನಡೆಯಿತು. ಪ್ರಾಚಾರ್ಯ ಎ.ಎಸ್. ಕೊಣ್ಣೂರ, ಮುಖ್ಯ ಶಿಕ್ಷಕ ಸುರೇಂದ್ರಗೌಡ, ಶಿಕ್ಷಕರಾದ ಮಮತಾ, ಹನುಮಂತ, ಶರಾವತಿ, ಗೋಪಾಲ, ಸುರೇಶ, ರಾಘವೇಂದ್ರ ಇದ್ದರು. 
ಜಿಲ್ಲೆ

ವಸತಿ ಶಾಲೇಲಿ ವಲಯ ಮಟ್ಟದ ಕ್ರೀಡಾಕೂಟ

ಅಳವಂಡಿ: ವಲಯ ಮಟ್ಟದ ಪ್ರೌಢಶಾಲೆಗಳ 2024-25ನೇ ಸಾಲಿನ ಕ್ರೀಡಾಕೂಟ ಆಯೋಜನೆ ಸಂಬಂಧ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆ ಗ್ರಾಮದ ಮುದಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆಯಿತು.

ಪ್ರಸಕ್ತ ವರ್ಷದ ಕ್ರೀಡಾಕೂಟವನ್ನು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆ.19 ರಂದು ನಡೆಸಲು ತಿರ್ಮಾನಿಸಲಾಯಿತು. ಮುಂದಿನ ವರ್ಷದ ಕ್ರೀಡಾಕೂಟವನ್ನು ಕವಲೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆಸಲು ಒಪ್ಪಿಗೆ ಸೂಚಿಸಲಾಯಿತು. ಕ್ರೀಡಾಕೂಟಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಸಭೆ ಸಮ್ಮತಿಸಿತು.

ಪ್ರಾಚಾರ್ಯ ಎ.ಎಸ್. ಕೊಣ್ಣೂರ, ಮುಖ್ಯ ಶಿಕ್ಷಕ ಸುರೇಂದ್ರಗೌಡ ಪಾಟೀಲ, ಶಿಕ್ಷಕರಾದ ಮಮತಾ ಕೊಡಬಾಳ, ಹನುಮಂತ ಲಮಾಣಿ, ಶರಾವತಿ, ಗೋಪಾಲ ಬಡಿಗೇರ, ರಾಘವೇಂದ್ರ, ಸುರೇಶ ವಡ್ಡರ ಇತರರಿದ್ದರು.