ಅಳವಂಡಿ ಗ್ರಾಮದ ಶ್ರೀ ಮುದಕನಗೌಡ ಗಾಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು, ಪ್ರಮುಖರಾದ ಬಸವರಡ್ಡೆಪ್ಪ, ಗ್ಯಾನಪ್ಪ, ಶಂಕರಪ್ಪ, ಹನುಮಂತ, ಯಲ್ಲಪ್ಪ ಇತರರಿದ್ದರು.  
ಜಿಲ್ಲೆ

ಜ್ಞಾನ ನೀಡುವ ಶಿಕ್ಷಕರನ್ನು ಗೌರವಿಸಿ

ಕುರುವತ್ತಿ ಶ್ರೀಕಾಂತಪ್ಪ

ಅಳವಂಡಿ: ಮಕ್ಕಳಿಗೆ ಜ್ಞಾನವೆಂಬ ಆಸ್ತಿ ನೀಡುವ ಶಿಕ್ಷಕರನ್ನು ಗೌರವಿಸಬೇಕು. ಮಕ್ಕಳನ್ನು ಸಮಾಜ ಗುರುತಿಸುವಂತೆ ಶಿಕ್ಷಕರು ಕಲಿಸಬೇಕು ಎಂದು ಶಿಕ್ಷಣ ಪ್ರೇಮಿ ಬಸವರಡ್ಡೆಪ್ಪ ಹಳ್ಳಿಕೇರಿ ತಿಳಿಸಿದರು.

ಗ್ರಾಮದ ಶ್ರೀ ಮುದಕನಗೌಡ ಗಾಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಮಕ್ಕಳು ವಿದ್ಯಾವಂತರಾಗಲು ಶಿಕ್ಷಕರ ಜತೆ ಪಾಲಕರು ಅಭ್ಯಾಸ ಮಾಡಿಸಬೇಕು. ಶಾಲೆಗಳು ಜ್ಞಾನ ನೀಡುವ ಜೀವಂತ ದೇವಾಲಯಗಳು, ಮಕ್ಕಳೆ ದೇವರುಗಳು. ಶಿಕ್ಷಕರು ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದರು.

ಮುಖ್ಯಶಿಕ್ಷಕ ಯಲ್ಲಪ್ಪ ಬಂಡಿ ಮಾತನಾಡಿ, ಸರ್ಕಾರವು ಮಕ್ಕಳ ಓದಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ ಅವುಗಳನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಬೇಕು. ಇಂದಿನ ಆಧುನಿಕಯುಗದಲ್ಲಿ ಎಲ್ಲ ವಿಭಾಗಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಇವೆ ಕಾರಣ ಪರೀಕ್ಷೆ ಎದುರಿಸುವ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಯಶಸ್ಸು ಸಾಧಕರ ಸೊತ್ತು ಎಂದರು.

ಎಸ್ಡಿಎಂಸಿ ಅಧ್ಯಕ್ಷ ಶಂಕರಪ್ಪ ಕರಡಿ, ಪ್ರಮುಖರಾದ ಗ್ಯಾನಪ್ಪ ಹಳ್ಳಿಕೇರಿ, ಹನುಮಂತ ಸಾಹುಕಾರ, ಶಿಕ್ಷಕರಾದ ಕೋಟೆಪ್ಪ ಮೇಟಿ, ಶರಣಪ್ಪ ವಟಪರವಿ, ನಾಗರಾಜ, ಮಹಾಂತೇಶ ಜೋಷಿ, ಶ್ರೀದೇವಿ ಬಂಡಿಹಾಳ, ಶಾಂತ ಹಮ್ಮಗಿ ಇತರರಿದ್ದರು.