ಜಿಲ್ಲೆ

ಸಿದ್ಧೇಶ್ವರ ಮಹಾರಥೋತ್ಸವ ಫೆ.9 ರಂದು

ಪ್ರವೀಣ ಉದುಸಾ ದಲಬಂಜನ್

ಅಳವಂಡಿ: ಗ್ರಾಮದ ಭಕ್ತರ ಆರಾಧ್ಯದೈವ ಶ್ರೀ ಸಿದ್ಧೇಶ್ವರ ಮಹಾರಥೋತ್ಸವ ಫೆ.9 ರಂದು ವಿಜೃಂಭಣೆಯಿಂದ ಜರುಗಲಿದೆ.

ಅಂದು ಬೆಳಗ್ಗೆ ಸಿದ್ಧೇಶ್ವರಗೆ ವಿಶೇಷ ಪೂಜೆ, ಮಹಾರುದ್ರಾಭಿಷೇಕ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮೋರನಾಳ ಗ್ರಾಮದ ಭೀಮವ್ವ ಶಿಳ್ಳಿಕ್ಯಾತರ್‌ಗೆ ಗೌರವ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ಕ್ಕೆ ಶ್ರೀ ಸಿದ್ಧೇಶ್ವರ ಧ್ವಜ ಲೀಲಾವ, ಸಂಜೆ 5.30ಕ್ಕೆ ಮಹಾ ರಥೋತ್ಸವ ಜರುಗಲಿದೆ.

ಧರ್ಮಸಭೆಯಲ್ಲಿ ಮಾನಿಹಳ್ಳಿ ಪುರವರ್ಗಮಠದ ಡಾ.ಮಳೆಯೋಗೇಶ್ವರ ಶಿವಾಚಾರ್ಯರು ಸಾನ್ನಿಧ್ಯವಹಿಸುವರು. ಹರಪನಹಳ್ಳಿಯ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯರು, ಸಿದ್ಧೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು, ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜನಾರ್ದನ ರಡ್ಡಿ, ಮಾಜಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮಾಜಿ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ, ಅಳವಂಡಿ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಪ್ರಮುಖರಾದ ಪ್ರದೀಪಶೇಟ್, ಸಿ.ವಿ.ಚಂದ್ರಶೇಖರ, ಡಾ.ಬಸವರಾಜ ಕ್ಯಾವಟರ, ನವೀನ ಗುಳಗಣ್ಣವರ, ಅಂದಣ್ಣ ಅಗಡಿ, ಪ್ರದೀಪಗೌಡ ಮಾಲಿಪಾಟೀಲ, ವೆಂಕನಗೌಡ ಹಿರೇಗೌಡ್ರ, ಭರಮಪ್ಪ ನಗರ, ಶಿವಯೋಗಿಸ್ವಾಮಿ, ಡಾ.ಸಿದ್ಧಲಿಂಗಸ್ವಾಮಿ ಹಾಗೂ ಗ್ರಾಪಂ ಸದಸ್ಯರು, ಮುಖಂಡರು ಭಾಗವಹಿಸುವರು.

ಫೆ.10ರ ಬೆಳಗ್ಗೆ 8.30ಕ್ಕೆ ಅಯ್ಯಚಾರ ದೀಕ್ಷಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11ಕ್ಕೆ ಧರ್ಮಸಭೆ ಮತ್ತು ಗೋ ಸಾಕಾಣಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಸಂಜೆ 5.30ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ಕಡುಬಿನ ಕಾಳಗ, ರಾತ್ರಿ 9ಕ್ಕೆ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮರುಳಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯವಹಿಸುವರು. ಹಿರೇಹಡಗಲಿಯ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳು ನೇತೃತ್ವ ವಹಿಸುವರು. ಅತಿಥಿಗಳಾಗಿ ರಾಜೇಶಸ್ವಾಮಿ, ಡಾ.ಚನ್ನವೀರ ಸ್ವಾಮೀಜಿ, ರವಿಶಂಕರ ಸ್ವಾಮೀಜಿ, ಪಿಎಸ್‌ಐ ಪ್ರಲ್ಹಾದ ನಾಯಕ, ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶ ಬೂಮರಡ್ಡಿ, ಪ್ರಮುಖರಾದ ವೀರೇಶ ಮಹಾಂತಯ್ಯನಮಠ, ಈಶಪ್ಪ ಮಾದಿನೂರ, ಸಾದಿಕ್ ಅಕ್ತರ, ಮೂರ್ತೆಪ್ಪ ಗಿಣಿಗೇರ ಇತರರು ಭಾಗವಹಿಸುವವರು ಎಂದು ಶ್ರೀಗಳು ತಿಳಿಸಿದ್ದಾರೆ.