ಅಳವಂಡಿ: ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಅವರು ಯುವಕರ ಕಣ್ಮಣಿಯಾಗಿದ್ದಾರೆ. ಅವರ ಆದರ್ಶ ಹಾಗೂ ದೇಶಪ್ರೇಮವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ತಾಪಂ ಸದಸ್ಯ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ ಹೇಳಿದರು.
ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಸಂಗೊಳ್ಳಿ ರಾಯಣ್ಣ ಯುವ ಸೇನೆ ಆಯೋಜಿಸಿದ್ದ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಸ್ವಾತಂತ್ರೃ ಸಂಗ್ರಾಮದಲ್ಲಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ರಾಯಣ್ಣ ಅವರು ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಬ್ರಿಟಿಷ್‌ರ ವಿರುದ್ಧ ರಣತಂತ್ರ ರೂಪಿಸಿದ್ದರು. ಹೋರಾಟ ಮನೋಭಾವದಿಂದ ಪ್ರಸಿದ್ದಿ ಪಡೆದ ರಾಯಣ್ಣ ದೇಶ ಕಂಡ ಅಪ್ರತಿಮ ಹೋರಾಟಗಾರ ಎಂದರು.
ತಳಿರು ತೋರಣ, ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಸಂಗೊಳ್ಳಿ ರಾಯಣ್ಣರ ಭಾವಚಿತ್ರ ಪ್ರತಿಷ್ಠಾಪಿಸಿ ವಾದ್ಯ ಮೇಳದೊಂದಿಗೆ ಗ್ರಾಮದ ಶ್ರೀಸಿದ್ಧೇಶ್ವರ ಕಾಲೇಜಿನಿಂದ ಗ್ರಾಮದ ಪ್ರಮುಖ ಬೀದಿಗಳ ಅದ್ದೂರಿಯಿಂದ ಮೆರವಣಿಗೆ ನಡೆಯಿತು.
ಪ್ರಮುಖರಾದ ಭರಮಪ್ಪ ನಗರ, ಗುರುಬಸವರಾಜ ಹಳ್ಳಿಕೇರಿ, ಅನ್ವರ ಗಡಾದ, ಹನುಮಂತಪ್ಪ ಕರಡಿ, ಅರವಿಂದ ಬಿರಾದಾರ, ರೇಣುಕಪ್ಪ, ಹನುಮಂತ ಜಾಣಗಾರ, ಇಸ್ಮಾಯಿಲ್, ಪ್ರಕಾಶ, ಸಾಗರ, ಮಲ್ಲಪ್ಪ, ತೋಟಯ್ಯ, ಪರಶುರಾಮ, ವಸಂತ, ಹನುಮಂತ, ದ್ಯಾಮಣ್ಣ ಮ್ಯಾಗಡೆ, ಶರಣಪ್ಪ, ಸುನೀಲ, ಪರಶು, ಬೀರಪ್ಪ, ಪರಸಪ್ಪ, ದೇವು, ಆಕಾಶ, ನಜೀರ, ಹನುಮಪ್ಪ ಇತರರಿದ್ದರು.