ಜಿಲ್ಲೆ

ನಿಲೋಗಿಪುರದಲ್ಲಿ ಶರಣಬಸವೇಶ್ವರ ಪುರಾಣ ಮಂಗಲ; ಮಹಿಳೆಯರಿಂದ ಕುಂಭ ಮೆರವಣಿಗೆ

ಅಳವಂಡಿ: ನಿಲೋಗಿಪುರ ಗ್ರಾಮದ ಶ್ರೀಮಾರುತೇಶ್ವರ ದೇವಸ್ಥಾನದಲ್ಲಿ ಕಲಬುರಗಿ ಶ್ರೀಶರಣಬಸವೇಶ್ವರ ಪುರಾಣ ಮಹಾ ಮಂಗಲದ ಅಂಗವಾಗಿ ಶನಿವಾರ ಮಹಿಳೆಯರ ಕುಂಭ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ಗ್ರಾಮದ ಎಲ್ಲ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಹೂಗಳಿಂದ ಅಲಂಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ದೇವಸ್ಥಾನದಿಂದ 101 ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಯಿತು. ಬಳಿಕ ಮಹಾ ದಾಸೋಹ ಕಾರ್ಯಕ್ರಮ ನೆರವೇರಿತು. ಪ್ರಮುಖರಾದ ರಾಮಣ್ಣ, ಹನುಮಪ್ಪ, ಶಿವಪ್ಪ, ಹನುಮಪ್ಪ, ಮಹೇಶ ರಡ್ಡೇರ, ರಾಮಣ್ಣ, ಕಿಷ್ಟಪ್ಪ ರಡ್ಡೇರ, ಆನಂದರಡ್ಡಿ ರಡ್ಡೇರ, ಅಂದಪ್ಪ, ಪರಮೇಶ್ವರಯ್ಯ, ಲಕ್ಷ್ಮಣ, ಹನುಮೇಶ, ರವಿ, ಪ್ರಶಾಂತ ಬಸವರಾಜ, ದೇವೆಂದ್ರ, ಶರಣಪ್ಪ, ಈರಪ್ಪ, ಕನಕನಗೌಡ, ಮುದಿಯಪ್ಪ, ನಾಗಪ್ಪ ಇತರರಿದ್ದರು.