ನಿಲೋಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಾಟಾ ಪವರ್ ಹಾಗೂ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ ನಡೆದ ವಿಜ್ಞಾನ ಶಿಬಿರದಲ್ಲಿ ಮುಖ್ಯ ಶಿಕ್ಷಕ ಗುರುರಾಜ ಪಾಟೀಲ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಶಿವಪ್ಪ ಅಕ್ಕಸಾಲಿ, ಶಿಕ್ಷಕರಾದ ಮುತ್ತು ಎಚ್.ಬನ್ನಿಕೊಪ್ಪ, ಚಂದ್ರಶೇಖರ ಸಿಂದೋಗಿ ಇದ್ದರು. 
ಜಿಲ್ಲೆ

ವಿಜ್ಞಾನ ಜ್ಞಾನಕ್ಕೆ ಶಿಬಿರ ಸಹಕಾರಿ

ಶ್ರೀನಾಥ

ಅಳವಂಡಿ: ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರ ಜತೆಗೆ ವಿಜ್ಞಾನವನ್ನು ಜೀವನದ ಒಂದು ಭಾಗವಾಗಿ ಸ್ವೀಕರಿಸಬೇಕು ಎಂದು ಮುಖ್ಯ ಶಿಕ್ಷಕ ಗುರುರಾಜ ಪಾಟೀಲ ಹೇಳಿದರು.

ಸಮೀಪದ ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಾಟಾ ಪವರ್, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಶನಿವಾರ ಹಮ್ಮಿಕೊಂಡಿದ್ದ ಹದಿನೈದು ದಿನಗಳ ಬಿಎಲ್ಇ ವಿಜ್ಞಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಸರ್ಕಾರಿ ಶಾಲೆ ಮಕ್ಕಳಿಗೆ ವಿಜ್ಞಾನದ ಮೂಲಭೂತ ನಿಯಮಗಳ ಪರಿಚಯವಾಗಬೇಕು. ದಿನನಿತ್ಯ ನಾವು ಉಪಯೋಗಿಸುವ ವಸ್ತುಗಳಲ್ಲಿ ವಿಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಇಂಥ ಶಿಬಿರಗಳು ನೆರವಾಗಲಿದ್ದು, ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಟಾಟಾ ಪವರ್ ಹಾಗೂ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕೊಪ್ಪಳ ವಿಭಾಗದ ಕಾರ್ಯಕ್ರಮಾಧಿಕಾರಿ ಶಿವಪ್ಪ ಅಕ್ಕಸಾಲಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುತೂಹಲಕಾರಿ ಅಂಶಗಳನ್ನು ತಿಳಿಸಿ, ಅವರಲ್ಲಿ ಸಂಶೋಧನಾತ್ಮಕ ಮನೋಭಾವ ಬೆಳೆಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಮಕ್ಕಳು ಹೊಸ ಆವಿಷ್ಕಾರ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.