ಅಳವಂಡಿ: ಮಳೆಗಾಲದಲ್ಲಿ ನೀರು ನಿಂತ ಜಾಗದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಎಲ್ಲರೂ ಮನೆ ಸುತ್ತಲ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಆರೋಗ್ಯ ನೀರಿಕ್ಷಣಾಧಿಕಾರಿ ಕಾಶಪ್ಪ ತಿಳಿಸಿದರು.
ನಿಲೋಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಡೆದ ಡೆಂೆ, ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಆಗಾಗ ಬದಲಿಸಬೇಕು. ಸೊಳ್ಳೆಯ ಕಡಿತ ಚಿಕ್ಕದಾದರೂ ಕಾಟ ದೊಡ್ಡದು. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಕೊಳ್ಳಿ ಎಂದರು.
ಮುಖ್ಯ ಶಿಕ್ಷಕ ಗುರುರಾಜ ಪಾಟೀಲ, ಶಿಕ್ಷಕರಾದ ಚನ್ನಪ್ಪ, ಮುತ್ತು, ಬಸಪ್ಪ, ಸಂಗಪ್ಪ, ಮಂಜುನಾಥ, ನಾಗರಾಜ, ಗಂಗಾ ಆರೋಗ್ಯ ಸುರಕ್ಷತಾಧಿಕಾರಿಗಳಾದ ಪ್ರತಿಭಾ, ರೇಷ್ಮಾ, ಶೋಭಾ, ಆಶಾಗಳಾದ ರೇಣವ್ವ, ಲಕ್ಷ್ಮಿಭಾಯಿ ಇತರರು ಇದ್ದರು.