ಅಳವಂಡಿಯಲ್ಲಿ ನ್ಯಾನೋ ಯೂರಿಯಾ ಹಾಗೂ ಡಿಎಪಿ ಕುರಿತು ಎಡಿಎ ಜೀವನಸಾಬ್ ಕುಷ್ಟಗಿ ಮಾಹಿತಿ ನೀಡಿದರು. ಎಒ ಪ್ರತಾಪಗೌಡ ನಂದನಗೌಡ, ರೈತರಾದ ಮಾಂತೇಶ ಇಟಗಿ, ಕರಿಯಪ್ಪ ಮ್ಯಾಗಡಿ, ಸಂಜು ರೆಡ್ಡಿ ನಾಗರಹಳ್ಳಿ, ಬಸವರಾಜ, ಶೇಷರೆಡ್ಡಿ ತವದಿ, ಖಾದರ ಸಾಬ ಇತರರಿದ್ದರು.  
ಜಿಲ್ಲೆ

ಸಾಂಪ್ರದಾಯಿಕ ಯೂರಿಯಾಕ್ಕಿಂತ ನ್ಯಾನೋ ಉತ್ತಮ

ಅಳವಂಡಿ: ನ್ಯಾನೋ ಯೂರಿಯಾ ದ್ರವರೂಪದ ರಸಗೊಬ್ಬರವಾಗಿದ್ದು, ಸಾಂಪ್ರದಾಯಿಕ ಯೂರಿಯಾಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜೀವನ ಸಾಬ್ ಕುಷ್ಟಗಿ ಹೇಳಿದರು.

ಗ್ರಾಮದ ಎಣ್ಣೆ ಬೀಜ ಸಹಕಾರ ಸಂಘದಲ್ಲಿ ನ್ಯಾನೋ ಯೂರಿಯಾ ಹಾಗೂ ಡಿಎಪಿ ಕುರಿತ ಮಾಹಿತಿ ಹಾಗೂ ರಾಸಾಯನಿಕ ಗೊಬ್ಬರ ಸಂಗ್ರಹ ಪರಿಶೀಲನೆ ನಡೆಸಿ ಸೋಮವಾರ ಮಾತನಾಡಿದರು.

ನ್ಯಾನೊ ತಂತ್ರಜ್ಞಾನವನ್ನು ಆಧರಿಸಿದ್ದು, ಸಸ್ಯಗಳಿಗೆ ಸಾರಜನಕವನ್ನು ಒದಗಿಸುತ್ತದೆ. ಸುಸ್ಥಿರ ಕೃಷಿಗೆ ಸಹಾಯ ಮಾಡುತ್ತದೆ. ಇದನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಸಸ್ಯಗಳು ಸುಲಭವಾಗಿ ಹೀರಿಕೊಂಡು ಬೆಳವಣಿಗೆ ಹೊಂದುತ್ತವೆ. ಬೆಳೆಯ ಅಗತ್ಯಕ್ಕೆ ತಕ್ಕಂತೆ ಸರಿಯಾದ ಪ್ರಮಾಣದಲ್ಲಿ ನ್ಯಾನೋ ಯೂರಿಯಾ ಬಳಸಬೇಕು ಎಂದರು.

ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ ಮಾತನಾಡಿ, ನ್ಯಾನೋ ಯೂರಿಯಾ ಬೆಳೆಯ ಇಳುವರಿ ಹೆಚ್ಚಿಸುವುದಾಗಿ ಸಂಶೋಧನೆ ತೋರಿಸಿದೆ. ಇದರ ಬಳಕೆಯಿಂದ ರೈತರಿಗೆ ಖರ್ಚು ಕಡಿಮೆ ಆಗಲಿದೆ ಎಂದರು.