ಅಳವಂಡಿ: ಪ್ರತಿಯೊಬ್ಬರೂ ಜೀವನದಲ್ಲಿ ಮಾನವೀಯತೆ, ಸದ್ಗುಣ ಮೈಗೂಡಿಸಿಕೊಳ್ಳಬೇಕು ಎಂದು ಮುಂಡರಗಿಯ ನಾಡೋಜ ಶ್ರೀ ಅನ್ನದಾನೇಶ್ವರ ಶ್ರೀಗಳು ಹೇಳಿದರು.
ಬೆಳಗಟ್ಟಿ ಗ್ರಾಮದಲ್ಲಿ ಹಜರತ್ ಸೈಯದ್ ಶಾ ಮುಸ್ತಫಾ ಖಾದ್ರಿ ದರ್ಗಾ ಉರುಸ್ ಹಾಗೂ ಸೈಯದ್ ಮುಸ್ತಫಾ ಖಾದ್ರಿ ಉರ್ಫ್ ಅನ್ವರ್ ಸಾಹೇಬ್ ಗುರುಪೀಠ ಸ್ವೀಕಾರ ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಯಾವುದೇ ಕಾರಣಕ್ಕೂ ಜಾತಿ, ಧರ್ಮದ ಬಗ್ಗೆ ಮಾತನಾಡದೆ ಅದರಲ್ಲಿರುವ ಜ್ಞಾನವನ್ನು ಅರಿತುಕೊಳ್ಳಬೇಕು. ಸಮಾಜಕ್ಕೆ ಒಳಿತನ್ನು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನೂತನ ಪೀಠಾಧಿಪತಿ ಅನ್ವರ್ ಸಾಹೇಬ್ ಮಾತನಾಡಿ, ಭಾವೈಕ್ಯ ಕೇವಲ ಮಾತಿನಲ್ಲಿರದೆ ನಡೆ ನುಡಿಯಲ್ಲಿರಬೇಕು. ಜಾತಿ, ಮತ, ಭೇದ-ಭಾವ ಎಣಿಸದೆ ಎಲ್ಲರೂ ಸೌಹಾರ್ದದಿಂದ ಜೀವನ ನಡೆಸಬೇಕು. ಸೂಫಿ ಸಂತರ, ಮಹಾತ್ಮರ ಆದರ್ಶಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರು.
ಅಳವಂಡಿ ಶ್ರೀ ಸಿದ್ಧೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯರು, ಕಲಕೇರಿ-ವಿರುಪಾಪುರದ ಮಧುಕೇಶ್ವರ ಸ್ವಾಮೀಜಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ವಕೀಲ ರೆಹಮತ್ ಖಾದ್ರಿ ಮಾತನಾಡಿದರು. ಗುರುಗಳಾದ ಸೈಯದ್ ಶಾ ಮೆಹಬೂಬ್ ಖಾದ್ರಿ, ಗಾಡಿ ತಾತ ಚೌಕಿಮಠ, ಖಾದರವಲಿ ಪೀರ್‌ಖಾದ್ರಿ, ಬದ್ರುದ್ದೀನ್ ಖಾದ್ರಿ, ತಾಜುದ್ದೀನ್ ಪೀರ್‌ಖಾದ್ರಿ, ಮೆಹಬೂಬ್ ಖಾದ್ರಿ, ಸನಾವುಲ್ಲಾ ಖಾದ್ರಿ, ಅನ್ವರಪೀರ್ ಖಾದ್ರಿ, ಅಬ್ದುಲ್ ವಹಾಬ್ ಖಾದ್ರಿ, ಹಾಶಿಂ ಪೀರ್‌ಖಾದ್ರಿ, ರಹಮತ್ ಖಾದ್ರಿ, ತಾಹಿರ್ ಖಾದ್ರಿ, ಅಹಮದ್, ಅಬುತುರಾವ್ ಖಾದ್ರಿ, ತಾಸಿಫ್ ಖಾದ್ರಿ, ದೂದಪೀರ್ ಖಾದ್ರಿ, ಮುರ್ತುಜಾ ಖಾದ್ರಿ, ಕರಿಮುದ್ದೀನ ಖಾದ್ರಿ, ಮುಖಂಡರಾದ ಎಸ್.ವಿ.ನಾಗರಳ್ಳಿ, ಭರಮಪ್ಪ ನಗರ, ತೋಟಪ್ಪ ಶಿಂಟ್ರ, ವಿಷ್ಣು ಹಾಳಕೇರಿ, ಮೋದಿನಸಾಬ್, ಮುದಿಯಪ್ಪ, ಮಹಾಂತೇಶ ಇತರರಿದ್ದರು.