ಮೋರನಾಳದಲ್ಲಿ ಬೀರಲಿಂಗೇಶ್ವರ ಹಾಗೂ ಚೌಡೇಶ್ವರಿ ಜಾತ್ರೆ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪ್ರಮುಖರಾದ ಶಿವಪ್ಪ, ನಿಂಗಪ್ಪ, ಚಂದ್ರಪ್ಪ, ಈರಪ್ಪ, ಬಸಪ್ಪ, ದೇವಪ್ಪ, ಅಂದಪ್ಪ, ಕರಿಯಪ್ಪ ಇತರರಿದ್ದರು. 
ಜಿಲ್ಲೆ

ಮೋರನಾಳದಲ್ಲಿ ಪಲ್ಲಕ್ಕಿ ಮಹೋತ್ಸವ ಅದ್ದೂರಿ

ಅಳವಂಡಿ: ಸಮೀಪದ ಮೋರನಾಳದಲ್ಲಿ ಶ್ರೀ ಬೀರಲಿಂಗೇಶ್ವರ ಹಾಗೂ ಚೌಡೇಶ್ವರಿ ದೇವಿ ಜಾತ್ರೆ ಅಂಗವಾಗಿ ಗಂಗಾಪೂಜೆ ಸೋಮವಾರ ಅದ್ದೂರಿಯಾಗಿ ಜರುಗಿತು.

ಬೀರಲಿಂಗೇಶ್ವರ ಹಾಗೂ ಚೌಡೇಶ್ವರಿ ಮೂರ್ತಿಗಳಿಗೆ ವಿವಿಧ ಹೂಗಳಿಂದ ಅಲಂಕರಿಸಿ ಪೂಜಿಸಲಾಯಿತು. ದೇವಸ್ಥಾನವನ್ನು ವಿದ್ಯುತ್ ದೀಪ, ತಳಿರು-ತೋರಣ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಭಕ್ತರು ದೇವರಿಗೆ ನೈವೇದ್ಯ ಸಲ್ಲಿಸಿ ಪೂಜಿಸಿದರು.

ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯೊಂದಿಗೆ ಮಹಿಳೆಯರ ಕಳಸ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಂಗಾಪೂಜೆಗೆ ತೆರಳಲಾಯಿತು. ಭಕ್ತರಿಗೆ ಅನ್ನ ದಾಸೋಹ ನಡೆಯಿತು.

ಪ್ರಮುಖರಾದ ಶಿವಪ್ಪ ಸಂಗಟಿ, ನಿಂಗಪ್ಪ ಬೂದಿಹಾಳ, ಶಿಕ್ಷಕರು ಚಂದ್ರಪ್ಪ ಹುಳ್ಳಿ, ಈರಪ್ಪ ಅಣಬಿ, ಬಸಪ್ಪ ಬಾವಿ, ದೇವಪ್ಪ ಮಾಗಳದ, ಅಂದಪ್ಪ ಮಾಗಳದ, ಕರಿಯಪ್ಪ ವಡ್ಡಟ್ಟಿ, ಮಂಜಪ್ಪ ಸಂಟಿ, ದೇವಪ್ಪ ಹಳ್ಳಿ, ಬಸಪ್ಪ ವಡ್ಡಟ್ಟಿ, ಗಿರಿಯಪ್ಪ ಹೊರಪೇಟೆ, ಹುಲುಗಪ್ಪ ಕಲ್ಲಳ್ಳಿ, ಶಿವಣ್ಣ ಮೋರ್ನಳ್ಳಿ, ಎಲ್ಲಪ್ಪ ಮಾಗಳದ, ರಾಮಣ್ಣ ವಾಲಿಕಾರ, ಶಿವಪ್ಪ ಇತರರಿದ್ದರು.