ಅಳವಂಡಿ ಗ್ರಾಮದ ಕೂಸಿನ ಮನೆಯನ್ನು ಮೊಬೈಲ್ ಕ್ರಷ್ ಸಂಸ್ಥೆಯ ಸಿಬ್ಬಂದಿ ವಿಜಯಲಕ್ಷ್ಮೀ ಹಾಗೂ ಚಿದಾನಂದ ಸ್ವಾಮಿ ಪರಿಶೀಲನೆ ನಡೆಸಿದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ, ಅಂಗನವಾಡಿ ಮೇಲ್ವಿಚಾರಕಿ ರೆಹಮತ್ ಬೀ, ಐಇಸಿ ಸಂಯೋಜಕ ದೇವರಾಜ ಪತ್ತಾರ, ಬಸವರಾಜ ಬಳಿಗಾರ ಇತರರಿದ್ದರು.  
ಜಿಲ್ಲೆ

ತಿಂಗಳಿಗೊಮ್ಮ ಆರೋಗ್ಯ ತಪಾಸಣೆ ನಡೆಸಿ

ಕುರುವತ್ತಿ ಶ್ರೀಕಾಂತಪ್ಪ

ಅಳವಂಡಿ: ಗ್ರಾಮದಲ್ಲಿ ನಿರ್ವಹಣೆ ಆಗುತ್ತಿರುವ ಕೂಸಿನ ಮನೆಗೆ ಮೊಬೈಲ್ ಕ್ರಷ್ ಮೇಲ್ವಿಚಾರಕ ಸಂಸ್ಥೆಯ ಸಿಬ್ಬಂದಿ ವಿಜಯಲಕ್ಷ್ಮೀ, ಚಿದಾನಂದ ಸ್ವಾಮಿ ಸೋಮವಾರ ಭೇಟಿ ನೀಡಿ, ಮಕ್ಕಳಿಗೆ ಆಹಾರ ವಿತರಣೆ, ಆರೋಗ್ಯ ತಪಾಸಣೆ, ಕೇರ್ ಟೇಕರ್‌ಗಳಿಗೆ ವೇತನ ಪಾವತಿ ಕುರಿತು ಪರಿಶೀಲಿಸಿದರು.

ಕೂಸಿನ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇರ್ ಟೇಕರ್‌ಗಳು ಅಗತ್ಯ ದಾಖಲಾತಿಗಳನ್ನು ಪ್ರತಿದಿನ ಅಪ್ಡೇಟ್ ಮಾಡಬೇಕು ಮತ್ತು ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದವರಿಗೆ ಮಾಹಿತಿ ನೀಡುವಂತೆ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ವಿಷಯ ನಿರ್ವಾಹಕ ಬಸವರಾಜ ಬಳಿಗಾರ, ರಾಜೀವಗಾಂಧಿ ಫೆಲೋ ಸೌಜನ್ಯ, ಪಿಡಿಒಗಳಾದ ಸಂಜಯ, ರತ್ನಾ, ಅನಿತಾ ಕಿಲ್ಲೇದ, ರವಾಸಾಹೇಬ, ಗುರುದೇವಮ್ಮ, ಕೃಷ್ಣಮೂರ್ತಿ, ಗೀತಾ ಕುಮಾರಿ, ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿಗಳಾದ ಮಂಜುನಾಥಯ್ಯ, ಸಣ್ಣ ಜಂಬಣ್ಣ, ಕೇರ್‌ಟೇಕರ್ಸ್ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.