ಅಳವಂಡಿ: ಜನ ಸಾಮಾನ್ಯರಿಗೂ ತಮ್ಮ ಕಾಯಿಲೆಗೆ ಉತ್ತಮ ಚಿಕಿತ್ಸೆ ದೊರೆಯಬೇಕಾದರೆ ಆರೋಗ್ಯ ತಪಾಸಣೆ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಆರ್ಥಿಕ ಉಳಿತಾಯ ಆಗಲಿದೆ ಎಂದು ಎಸ್.ಬಿ.ಎಸ್.ಆಯುರ್ವೆದಿಕ್ ಮಹಾ ವಿದ್ಯಾಲಯದ ಡಾ. ಗಾನಶ್ರೀ ತಿಳಿಸಿದರು.
ಗ್ರಾಮದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮುಂಡರಗಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಯುರ್ವೆದಿಕ್ ಕಾಲೇಜ ಮತ್ತು ಆಸ್ಪತ್ರೆ, ರಾಷ್ಟ್ರೀಯ ಸೇವಾ ಯೋಜನೆಯಿಂದ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಉಚಿತ ಶಿಬಿರ ಉದ್ದೇಶಿಸಿ ಮಾತನಾಡಿದರು. ನೂರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧ ಪಡೆದರು.
ಗ್ರಾಮೀಣ ಭಾಗದಲ್ಲಿ ಇಂತಹ ಆರೋಗ್ಯ ಶಿಬಿರ ನಡೆಸುವುದರಿಂದ ಸಣ್ಣ ಪುಟ್ಟ ಕಾಯಿಲೆಗಳ ಜತೆಗೆ ಬಿಪಿ, ಷುಗರ್ ಇತರ ಕಾಯಿಲೆಗಳ ಪತ್ತೆ ಮತ್ತು ಚಿಕಿತ್ಸೆ ಸಹಕಾರಿಯಾಗಿದೆ ಎಂದರು.