ಅಳವಂಡಿ ಸಮೀಪದ ರಘುನಾಥನಹಳ್ಳಿಯಲ್ಲಿ ಶ್ರೀ ಮರಿಯಮ್ಮದೇವಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪ್ರಮುಖರಾದ ಪೂಜಪ್ಪ, ಮರಿಸ್ವಾಮಿ, ಬನ್ನಪ್ಪ, ಯಮನಪ್ಪ ಇತರರಿದ್ದರು.  
ಜಿಲ್ಲೆ

ಮರಿಯಮ್ಮ ದೇವಿ ಪಲ್ಲಕ್ಕಿ ಮೆರವಣಿಗೆ

ಕುರುವತ್ತಿ ಶ್ರೀಕಾಂತಪ್ಪ

ಅಳವಂಡಿ: ಸಮೀಪದ ರಘುನಾಥನಹಳ್ಳಿಯಲ್ಲಿ ಶ್ರೀ ಮರಿಯಮ್ಮದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಶ್ರೀಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಶ್ರೀದೇವಿ ಮೂರ್ತಿ ಇರಿಸಿ ಮಹಿಳೆಯರ ಕಳಸ ಹಾಗೂ ಡೊಳ್ಳು ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗಂಗಾ ಸ್ಥಳಕ್ಕೆ ತೆರಳಿ ಪೂಜೆ ನೆರವೇರಿಸಲಾಯಿತು.