ಅಳವಂಡಿ ಸಮೀಪದ ಘಟ್ಟಿರಡ್ಡಿಹಾದಲ್ಲಿ ಗ್ರಾಮಸ್ಥರು ಗುರುವಾರ ಸಮೃದ್ಧ ಮಳೆ-ಬೆಳೆಗಾಗಿ ಮಳೆಮಲ್ಲಪ್ಪಗೆ ಪೂಜೆ ಸಲ್ಲಿಸಿ ದಾಸೋಹ ನೆರವೇರಿಸಿದರು. ಪ್ರಮುಖರಾದ ಶಂಬುಲಿಂಗಯ್ಯ, ಉಮೇಶ ಡಂಬಳ, ಅಂದಪ್ಪ ರಕರಡ್ಡಿ, ದೇವರಡ್ಡಿ ಚನ್ನಳ್ಳಿ, ಚನ್ನಬಸಪ್ಪ. ಅಂಜಿನಪ್ಪ ಇತರರಿದ್ದರು.  
ಜಿಲ್ಲೆ

ಲೋಕ ಕಲ್ಯಾಣಾರ್ಥ ಮಳೆ ಮಲ್ಲಪ್ಪಗೆ ಪೂಜೆ

ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥ ಮಳೆಮಲ್ಲಪ್ಪಗೆ ವಿಶೇಷ ಪೂಜೆ ಶುಕ್ರವಾರ ನೆರವೇರಿಸಲಾಯಿತು.

ಗ್ರಾಮ ಹೊರವಲಯದ ಗಂಗಮ್ಮನ ಕೆರೆ ಬಳಿ ಮಲ್ಲಪ್ಪನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಗಂಗಾಮಾತೆಗೆ ಪೂಜೆ ನೆರವೇರಿಸಿ ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಲಾಯಿತು.

ಗ್ರಾಮದ ಭಕ್ತರಿಂದ ಸಂಗ್ರಹಿಸಿದ ಜೋಳದ ಸಂಗಟಿ ಮತ್ತು ಸಾಂಬರನ್ನು ನೈವೇದ್ಯ ಮಾಡಲಾಯಿತು. ಬಳಿಕ ದಾಸೋಹ ಸೇವೆ ನಡೆಯಿತು.